ಸಂಗೀತದಿಂದ ಸುಸಂಸ್ಕೃತಿ ಜ್ಞಾನ ಮನೋ ವಿಕಾಸಕ್ಕೆ ಸಹಕಾರಿ; ವಿದ್ವಾನ್ ಆರ್.ಕೆ. ಪದ್ಮನಾಭ

ಅರಕಲಗೂಡು: ಸುಸಂಸ್ಕೃತಿ ಕಲಿಸುವ ಸಂಗೀತ ಜ್ಞಾನಾರ್ಜನೆಗೆ ಜತೆಗೆ ಮಕ್ಕಳ ಮನೋ ವಿಕಾಸಕ್ಕೆ ಸಹಕಾರಿಯಾಗಿದ್ದು ಎಲ್ಲರೂ ಚಿಕ್ಕಂದಿನಿAದಲೇ ಅವಶ್ಯಕವಾಗಿ ಸಂಗೀತ ಕಲೆ ಕಲಿಸುವ ಪ್ರವೃತಿ ಬೆಳೆಸಿಕೊಳ್ಳಬೇಕು ಎಂದು ವಿದ್ವಾನ್ ಆರ್.ಕೆ. ಪದ್ಮನಾಭ ಸಲಹೆ ನೀಡಿದರು.

ತಾಲೂಕಿನ ರುದ್ರಪಟ್ಟಣದ ಶ್ರೀರಾಮ ಮಂದಿರದಲ್ಲಿ ಬುಧವಾರ ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ ವತಿಯಿಂದ ಐದು ದಿನಗಳ ಕಾಲ ಹಮ್ಮಿಕೊಂಡಿರುವ 21ನೇ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತ ಕಲೆ ಅಳವಡಿಸಿಕೊಂಡ ಅಪಾರ ಮಕ್ಕಳು ಅತ್ಯುನ್ನತ ದರ್ಜೆಯಲ್ಲಿ ತೇಗಡೆಯಾಗಿ ಉನ್ನತ ಶಿಕ್ಷಣ ಗಳಿಸಿದ್ದಾರೆ. ಹೀಗಾಗಿ ಸಂಗೀತಾಸಕ್ತಿ ಬೆಳೆಸಿಕೊಂಡ ಮಕ್ಕಳ ಸಂಗೀತ ಕಲೆಯನ್ನು ಚಿವುಟಿ ಹಾಕದೆ ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಇಲ್ಲಿ ಸಾಕಷ್ಟು ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಡಲಾಗಿದೆ. 

ಇದು ಸಾಮಾನ್ಯ ವೇದಿಕೆಯಲ್ಲ ಮಹಾನ್ ಸಂಗೀತ ವಿದ್ವಾಂಸರು ಹಾಡಿರುವ ವೇದಿಕೆ ಇದಾಗಿದ್ದು ಇಲ್ಲಿ ಸಂಗೀತ ಸೇವೆಗೆ ತಮ್ಮ ಬದುಕನ್ನೆ ಮುಡುಪಾಗಿಟ್ಟು ಹಾಡಿದವರು ಬಹಳಷ್ಟು ಎತ್ತರಕ್ಕೆ ಬೆಳೆದು ಕರ್ನಾಟಕ ಶಾಸ್ತಿçÃಯ ಸಂಗೀತ ಪ್ರಪಂಚಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಇದು ಕಲಾ ಪ್ರಪಂಚಕ್ಕೆ ನಮ್ಮ ಹಳ್ಳಿಯ ಪುಣ್ಯ. ಕಲೆಯನ್ನು ಆರಾಧಿಸಿದರೆ ಬದುಕಿನ ರೀತಿಯೇ ಬೇರೆಯಾಗಲಿದೆ ಎಂದರು.

ಮುಖ್ಯವಾಗಿ ಶಾಸ್ತ್ರೀಯ ಸಂಗೀತ ಎಲ್ಲದಕ್ಕೂ ಸಿದ್ದೌಷಧವಿದ್ದಂತೆ. ನಾದ ದೇವತೆಯನ್ನು ಒಲಿಸಿಕೊಂಡರೆ ಉತ್ತುಂಗಕ್ಕೇರಬಹುದು. ಬೆಂಗಳೂರು, ಮೈಸೂರು ನಗರಗಳಿಗಿಂತ ಹಳ್ಳಿಗಳಲ್ಲಿ ನಡೆಯುವ ಸಂಗೀತ ಕಚೇರಿಗಳಿಗೆ ಹೆಚ್ಚಿನ ವಿಶೇಷತೆ ಇದೆ. ಇಲ್ಲಿ ಶಾಸ್ತ್ರಬದ್ದ ಹಾಗೂ ಲಯಬದ್ದವಾಗಿ ವಿವಿಧ ಕಲಾವಿದರು ಸಂಗೀತ ಕಚೇರಿ ನಡೆಸಿ ಪ್ರೇಕ್ಷಕರಿಗೆ ಸಂಗೀತದ ರಸದೌತಣ ಉಣಬಡಿಸಿದ್ದಾರೆ. ಸಂಗೀತ ಕಚೇರಿಯಲ್ಲಿ ಮಹಿಳೆಯರಿಗೂ ಹೆಚ್ಚಿನದಾಗಿ ವೇದಿಕೆ ಒದಗಿಸಿದ್ದು ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ ಎಂದು ವಿದ್ವಾನ್ ಆರ್.ಕೆ. ಪದ್ಮನಾಭ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಉತ್ಸಾಹಿ ಪ್ರತಿಭೆ ರಮಾ ಕಾರ್ಯಕ್ರಮ ನಿರ್ವಹಣೆ ನಿರ್ವಹಿಸಿದರು.

Post a Comment

0 Comments