ರಾಜದಲ್ಲೇ ಮೊಟ್ಟಮೊದಲಿಗೆ ಕೊಣನೂರು ಸಮುದಾಯ ಆರೋಗ್ಯ ಕೇಂದ್ರವೊಂದರಲ್ಲಿ ಉತ್ತಮ ಚಿಕಿತ್ಸಾತ್ಮಕ ತಂತ್ರಜ್ಞಾನ ಸೌಲಭ್ಯವುಳ್ಳ ಕೋವಿಡ್ ಆಸ್ಪತ್ರೆ ಚಿಕಿತ್ಸೆಗೆ ಚಾಲನೆ ನೀಡಿ ಹೆಗ್ಗಳಿಕೆ ಮೆರೆದ ಶಾಸಕ ಎಟಿಆರ್

ಅರಕಲಗೂಡು: ರಾಜ್ಯದಲ್ಲಿಯೇ ಮೊದಲ ಬಾರಿಗೆ 34 ಬೆಡ್‌ಗಳ ಕೋವಿಡ್ ಆಸ್ಪತ್ರೆ ತೆರೆದು ಗ್ರಾಮೀಣ ಪ್ರದೇಶದ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿರುವ ಹಿರಿಮೆಯನ್ನು ಕೊಣನೂರು ಸಮುದಾಯ ಆರೋಗ್ಯ ಕೇಂದ್ರ ತನ್ನದಾಗಿಸಿಕೊಂಡಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಕೊಂಡಾಡಿದರು.

ತಾಲೂಕಿನ ಕೊಣನೂರು ಸಮುದಾಯ ಆರೋಗ್ಯ ಕೇಂದ್ರದ ಕೋವಿಡ್ ಆಸ್ಪತ್ರೆಯಲ್ಲಿ ಶುಕ್ರವಾರ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಧಿಕೃತವಾಗಿ ಚಾಲನೆ ಮಾತನಾಡಿದ ಅವರು, ಜಿಲ್ಲಾಡಳಿತದೊಂದಿಗೆ ಮೊನ್ನೆಯಷ್ಟೆ ಪೋರ್ಟಿಯಾ, ಡಾಕ್ಟರ್ ಫಾರ್ ಯು ಎನ್‌ಜಿಒ ಸಂಸ್ಥೆ ಜಂಟಿ ಒಪ್ಪಂದ ಮಾಡಿಕೊಂಡು ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಲ ಕ್ರಮ ಕೈಗೊಳ್ಳಲಾಗಿದೆ. ರೋಗಿಗಳಿಗೆ 25 ಬೆಡ್‌ಗಳು, ಅತಿಹೆಚ್ಚು ಪ್ರಾಣವಾಯು ನೀಡುವ 4 ಹೈಪೋ ಆಕ್ಸಿಜನ್ ಬೆಡ್‌ಗಳು, 2 ಎಮರ್ಜೆನ್ಸಿ ಬೆಡ್‌ಗಳು ಹಾಗೂ 3 ಬೆಡ್‌ಗಳನ್ನು ಆರೋಗ್ಯ ಕಾರ್ಯಕರ್ತರಿಗೆ ಮೀಸಲಿಡಲಾಗಿದೆ. ಆರೋಗ್ಯ ಸೇವೆ ಹೆಸರಾದ ಎನ್‌ಜಿಒ ಸಂಸ್ಥೆ ಸಹಯೋಗದಲ್ಲಿ ಸಮುದಾಯ ಆರೋಗ್ಯ ಕೇಂದ್ರವೊAದರಲ್ಲಿ ಕೋವಿಡ್ ಆಸ್ಪತ್ರೆ ತೆರೆದು ರಾಜ್ಯದಲ್ಲಿ ಇಲ್ಲಿಯೇ ಮೊದಲು ಬಾರಿಗೆ ಕಾರ್ಯಾರಂಭ ನಡೆಸುತ್ತಿರುವುದು ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೋವಿಡ್ ಎರಡನೇ ಅಲೆ ಮುಗಿದು, ಆಗಸ್ಟ್ ತಿಂಗಳಿನಲ್ಲಿಯೇ ಮುರನೇ ಅಲೆ ಪ್ರಾರಂಭವಾಗುವ ಕುರಿತು ತಜ್ಞರ ಸಮಿತಿ ವರದಿ ನೀಡಿದೆ. ಈ ದಿಸೆಯಲ್ಲಿ ಇಲ್ಲಿ ಕೋವಿಡ್ ಆಸ್ಪತ್ರೆ ಪ್ರಾರಂಭಿಸಿ ಸಕಲ ರೀತಿಯಲ್ಲೂ ವ್ಯವಸ್ಥೆಗಳನ್ನು ಸಜ್ಜುಗೊಳಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿಯೇ ಅರಕಲಗೂಡು ಕೋವಿಡ್ ಆಸ್ಪತ್ರೆ ಉತ್ತಮ ಸೇವೆ ಸಲ್ಲಿಸಿದ ಹೆಗ್ಗಳಿಕೆ ಗಳಿಸಿದೆ. ಎನ್‌ಜಿಒ ಸಂಸ್ಥೆಯ ಸಹಾಯಧನದ ನೆರವಿನೊಂದಿಗೆ ತೆರೆದಿರುವ ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು, ಫಿಜಿಷಯನ್, ಸರ್ಜನ್‌ಗಳು, ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು ರೋಗಿಗಳಿಗೆ ಮಹತ್ತರವಾದ ಸೇವೆ ಸಲ್ಲಿಸಿ ಹೆಚ್ಚು ಪ್ರಶಂಸೆ ಪಡೆಯುವ ವಿಶ್ವಾಸವಿದೆ. ಆಸ್ಪತ್ರೆಯಲ್ಲಿ ಸದ್ಯಕ್ಕೆ 15 ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ, ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಗ್ರಾಪಂ ಅಧ್ಯಕ್ಷ ರಮೇಶ್, ಪೋರ್ಟಿಯಾ ಸಂಸ್ಥೆ ಸೇವಾ ಮುಖ್ಯಸ್ಥೆ ರಘುನಂದನ್, ಆಡಳಿತಾಧಿಕಾರಿ ರೇವಣ್ಣ, ಡಾ. ಅಖಿಲೇಶ್, ಸುರೇಶ್, ಎನ್‌ಜಿಒ ಸಂಸ್ಥೆ ಸಿಬ್ಬಂದಿ ಇದ್ದರು.

                          ಸಂಪಾದಕ - ರವಿ                        

Post a Comment

0 Comments