ಹೆಗ್ಡೆವಾರ್ ವಿಷಯ ಸೇರ್ಪಡೆ; ಕೊಡಗಿನಲ್ಲಿ‌‌ ಶಸ್ತ್ರಾಭ್ಯಾಸ ಏಕೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ

ಅರಕಲಗೂಡು: ಕೊಡಗಿನಲ್ಲಿ ಭಜರಂಗದಳದಿAದ ಯಾವ ದೃಷ್ಟಿಯಿಂದ ಶಸ್ತ್ರಾಸ್ತ್ರ ಅಭ್ಯಾಸ ನಡೆಸುತ್ತಿದ್ದಾರೆ, ಇದರ ಅವಶ್ಯಕತೆ ಇದೆಯೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದರು.

ತಾಲೂಕಿನ ಮಲ್ಲಿತಮ್ಮನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಏರ್ ಗನ್ ಶಸ್ತ್ರಾಭ್ಯಾಸ ಅಂತ ಹೇಳಿದ್ದಾರೆ. ಹಿಂದೂ ಸಂಘಟನೆಗಳು ಮಕ್ಕಳನ್ನು ಟೆರೆರಿಸ್ಟ್ನ ಒಂದು ಗುಂಪುಗಳನ್ನಾಗಿ ತಯಾರು ಮಾಡಲು ಮಾಡುತ್ತಿದ್ದೀರಾ. ಇದು ಎಲ್ಲೋ ಒಂದೆ ಕರೆ ಸಮಾಜದ ಸಾಮರಸ್ಯ, ಭಾವೈಕ್ಯತೆಯನ್ನು ಹಾಳುಮಾಡುವ ವಾತಾವರಣ. ಇವತ್ತು ನಮಗೆ ಬೇಕಾಗಿರುವುದು ಸರ್ವ ಜನಾಂಗದ ಶಾಂತಿಯ ತೋಟ. ಶಾಂತಿಯಿAದ ನಮ್ಮ ಹೋರಾಟ ಇರಬೇಕು, ಶಸ್ತ್ರದಿಂದ ಅಲ್ಲ. ದೇಶದ ಸಮಸ್ಯೆಗಳಿಗೆ ಪರಿಹಾರವನ್ನು ಶಾಂತಿಯಿAದ ಹೋರಾಟ ಮಾಡಿ ಪಡೆಯಬೇಕು. ಕೈಯಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಳ್ಳುವುದು ಸಮಸ್ಯೆಗೆ ಪರಿಹಾರವಲ್ಲ ಎಂದರು.

ಪಠ್ಯ ಪುಸ್ತಕದಲ್ಲಿ ಹೆಗ್ಡೆವಾರ್ ವಿಷಯ ಸೇರ್ಪಡೆ ವಿಚಾರ ಪ್ರಸ್ತಾಪಿಸಿದ ಕುಮಾರಸ್ವಾಮಿ, ನೀವು ಯಾವ ವಿಷಯಗಳನ್ನಾದರು ಇಟ್ಟುಕೊಳ್ಳಿ. ಮಕ್ಕಳಿಗೆ ಬೇಕಿರುವುದು ಉತ್ತಮವಾದ ಶಿಕ್ಷಣ. ಇಲ್ಲಿ ಗುಣಾತ್ಮಕವಾದ ಶಿಕ್ಷಣ ಬೇಕು. ಯಾವ ವ್ಯಕ್ತಿಗಳ ಪಾಠ ಮುಂದಿಟ್ಟುಕೊAಡು ಕಲಿಸುವುದು ಬೇಡ. ಮಕ್ಕಳಿಗೆ ಮೊದಲು ಕಲಿಸಬೇಕಿರುವುದು ಮನುಷ್ಯತ್ವ, ಹೃದಯ ವೈಶಾಲ್ಯತೆ, ಬದುಕುವ ಮಾರ್ಗ ಅದರ ಬಗ್ಗೆ ಮೊದಲು ಗಮನಕೊಡಲಿ. ಭಗತ್‌ಸಿಂಗ್ ಒಬ್ಬ ದೇಶಪ್ರೇಮಿ, ಸ್ವಾತಂತ್ರ‍್ಯಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದಂತ ವ್ಯಕ್ತಿ. ಅಂತಹವರ ವಿಷಯಗಳನ್ನು ತೆಗೆದು ಹಾಕಿ ಹೆಗ್ಡವಾರ್ ಸೇರಿಸಲು ಹೊರಟಿದ್ದಾರೆ. ಮುಂದೆ ಗೂಡ್ಸೆ, ಸಾವರ್ಕರ್ ವಿಷಯ ಇಟ್ಟುಕೊಳ್ಳುತ್ತೀರಾ. ಮುಂದೆ ಇನ್ನೇನು ಅಜೆಂಡಾ ತೆಗೆದುಕೊಂಡು ಹೋಗುತ್ತೀರಾ ಈ ಸಮಾಜದ ಸಾಮರಸ್ಯಕ್ಕೆ ಧಕ್ಕೆಯಾಗುವಂತಹ ವಾತಾವರಣ ನಿಮಗೆ ಬೇಕಾಗಿದೆ. ಈಗ ಕಾಶ್ಮೀರ ಫೈಲ್ಸ್ ಸಿನಿಮಾ ತೆಗೆದರು. ಇದರಿಂದ ಶಾಂತಿ ನೆಲೆಸಲು ಅವಕಾಶ ಕೊಟ್ಟಿದ್ದೀರಾ ಅಲ್ಲಿಯ ರಾಜಕಾರಣಿಗಳು ಏನು ಹೇಳಿಕೆ ಕೊಟ್ಟಿದ್ದಾರೆ ಎನ್ನುವುದನ್ನು ಗಮನಿಸಿದ್ದೇನೆ. ಇಲ್ಲಿ ದ್ವೇಷದ ಮನೋಭಾವನೆ ಬಿತ್ತಬೇಡಿ. ಪ್ರತಿಯೊಬ್ಬರಲ್ಲಿ ಸಹೋದರತ್ವ, ಸಾಮರಸ್ಯ, ಭಾವೈಕ್ಯತೆ ತರಲು ಯಾವ ರೀತಿಯ ತರಬೇಕು ಎನ್ನುವುದರ ಕಡೆ ಗಮನಕೊಡಿ ಎಂದು ಹೇಳಿದರು.

ಹಾಸನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್, ಶಾಸಕ ಸಿ.ಎನ್. ಬಾಲಕೃಷ್ಣ, ಮುಖಂಡರಾದ ಕೆ. ಸತೀಶ್, ಮುದ್ದನಹಳ್ಳಿ ರಮೇಶ್ ಇತರರಿದ್ದರು.

ಗ್ರಾಮ ಪ್ರವೇಶಿಸಿದ ಕುಮಾರಸ್ವಾಮಿ ಅವರಿಗೆ ಸಾಕಾನೆ ಮೂಲಕ ಹೂವಿನ ಹಾರ ಹಾಕಿ ಮಂಗಳವಾದ್ಯದೊಂದಿಗೆ ಅದ್ದೂರಿ ಸ್ವಾಗತ ಕೋರಲಾಯಿತು.

Post a Comment

0 Comments