ಎಚ್.ಡಿ. ರೇವಣ್ಣಗೆ ಕೈ ಮುಗಿದು ಸುಳ್ಳು ಹೇಳಬೇಡಿ ಎಂದು ತಿವಿದ ಎ. ಮಂಜು; ಇದೇನಿದು ರೇವಣ್ಣ ಪ್ರಹಸನ...

ಅರಕಲಗೂಡು: ತಾಲೂಕಿನಲ್ಲಿ ಹಾದು ಹೋಗಿರುವ ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ಅಭಿವೃದ್ಧಿ ನಾನು ಮಾಡಿಸಿದ್ದು ಎಂದು ಪದೇ ಪದೇ ಇಲ್ಲಿಗೆ ಬಂದು ಹಸಿ ಸುಳ್ಳು ಹೇಳಿಕೆ ನೀಡಿ ಮತದಾರರನ್ನು ಮರಳು ಮಾಡಲು ನಾಟಕವಾಡುತ್ತಿದ್ದ ಎಚ್.ಡಿ. ರೇವಣ್ಣ ಅವರಿಗೆ ಇಂದು ಮಾಜಿ ಸಚಿವ ಎ. ಮಂಜು ಟಾಂಗ್ ನೀಡಿದ ಪ್ರಸಂಗಕ್ಕೆ ರಾಮನಾಥಪುರದಲ್ಲಿ ನಡೆದ ಜೆಡಿಎಸ್ ಚುನಾವಣಾ ಪ್ರಚಾರ ಸಭೆ ಸಾಕ್ಷಿಯಾಯಿತು.

ಘಟನೆಯಿಂದ ಮುಲಾಜಿಲ್ಲದೆ ಜನರ ಮುಂದೆ ಸುಳ್ಳು ಹೇಳಿಕೆ ನೀಡುತ್ತಿದ್ದ ರೇವಣ್ಣ ಅವರಿಗೆ ಮುಖಭಂಗವಾಗಿ ನಗೆಪಾಟಲಿಗೀಡಾದ ಪ್ರಹಸನ ಜರುಗಿತು.

ಅರಕಲಗೂಡು ತಾಲೂಕಿನಲ್ಲಿ ಎರಡು ಪ್ರಮುಖ ಮಾರ್ಗಗಳು ಹಾದು ಹೋಗಿದ್ದು ಅವೆಂದರೆ ಹಾಸನ - ಪಿರಿಯಾಪಟ್ಟಣ ಮಾರ್ಗದ ರಸ್ತೆ ಹಾಗೂ ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ. ಅದೆಷ್ಟೋ ದಶಕಗಳ ಕಾಲ ಹಾಳು ಬೀಳು ಬಿದ್ದು ಅದ್ವಾನವಾಗಿದ್ದ ಈ ರಸ್ತೆಗಳಲ್ಲಿ ಗಡಿ ಭಾಗದ ಕೇರಳಾಪುರದಿಂದ ಜಿಲ್ಲಾ ಕೇಂದ್ರ ಹಾಸನಕ್ಕೆ ಹಾಗೂ ಕೊಣನೂರಿನಿಂದ ರಾಮನಾಥಪುರ ಮಾರ್ಗ ಹಾಸನಕ್ಕೆ ನಿತ್ಯ ಓಡಾಡುತ್ತಿದ್ದ ಪ್ರಯಾಣಿಕರ ಪಾಡು ಅಕ್ಷರಶಃ ನರಕದ ಯಾತನೆಯಾಗಿತ್ತು. ರಸ್ತೆ ಅನಾಹುತಗಳಿರಲಿ ಗುಂಡಿ ರಸ್ತೆಯಲ್ಲಿ ಬಸ್ ನಲ್ಲಿ ಪ್ರಯಾಣಿಸುವ ಗರ್ಭಿಣಿಯರಿಗೆ ಮೋಕಲಿ ಬಳಿ ಹೆರಿಗೆಯಾಗಿತ್ತು. ಅದೆಷ್ಟೋ ಸಾವು ನೋವು ಗಳಿಗೆ ಯಮದಾರಿಯಾಗಿದ್ದ ರಸ್ತೆ ಅಭಿವೃದ್ಧಿ ಗೆ ಮನಸ್ಸು ಮಾಡಿರಲಿಲ್ಲ.

ಹಾಸನ ಜಿಲ್ಲೆಯಲ್ಲೇ ಅರಕಲಗೂಡು ತಾಲೂಕು ಇದ್ದರೂ ರಸ್ತೆ ಅಭಿವೃದ್ಧಿ ಯಿಂದ ದೂರ ಉಳಿದಿತ್ತು. ಜಿಲ್ಲೆಯ ಎಚ್.ಡಿ. ದೇವೇಗೌಡರು ಪ್ರಧಾನಿಯಾದರೂ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾದರೂ ಇಷ್ಟೇ ಏಕೆ ರೇವಣ್ಣ ಅವರು ಲೋಕೋಪಯೋಗಿ ಸಚಿವರಾಗಿದ್ದರೂ ಜಿಲ್ಲೆ ಸರ್ಕಾರದ ಭಾಗವೇ  ಆಗಿದ್ದರೂ ಈ ತಾಲೂಕಿನ ಈ ಮಾರ್ಗದ‌ ರಸ್ತೆಯಲ್ಲಿನ ಕಳವಳಕಾರಿ ದುಸ್ಥಿತಿ ಕಣ್ಣಿಗೆ ಬಿದ್ದು ಮುಕ್ತಿ ಕಂಡಿರಲಿಲ್ಲ. 

ಕಡೆಗೂ ಈ ಪರಿ ಹದಗೆಟ್ಟು ಹಾಳಾಗಿದ್ದ ಈ ರಸ್ತೆಗಳ ಅಭಿವೃದ್ಧಿಗೆ ಮೈಸೂರಿನ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಿ ಬರಬೇಕಾಯಿತು. ಆಗ 2017ರಲ್ಲಿ ಎ. ಮಂಜು ಸಚಿವರಾಗಿದ್ದರು. ಅವರ ಕೋರಿಕೆ ಮೇರೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ದಾರಾಳವಾಗಿ ಕೋಟಿಗಟ್ಟಲೆ ದೊಡ್ಡ ಮೊತ್ತದ ಅನುದಾನ ನೀಡಿದ ಫಲವಾಗಿ ಇಂದು ಇವೆರಡು ಪ್ರಮುಖವಾದ ಮಾರ್ಗಗಳು ಅಭಿವೃದ್ಧಿ ಭಾಗ್ಯ ಕಂಡಿವೆ. ಜನರು ನೆಮ್ಮದಿಯಿಂದ ಓಡಾಡುತ್ತಿದ್ದಾರೆ.

ಚುನಾವಣೆ ಹೊತ್ತಿನಲ್ಲಿ ಈ ರಸ್ತೆ ಅಭಿವೃದ್ಧಿ ಕ್ರೆಡಿಟ್ ತನಗೆ ಸಿಗಲೆಂಬ ದುರುದ್ದೇಶದಿಂದ ರೇವಣ್ಣ ಕಳೆದ ಕೆಲ ತಿಂಗಳ ಹಿಂದೆ ಬಸವನಹಳ್ಳಿ ಗ್ರಾಮಕ್ಕೆ ಕುಮಾರಸ್ವಾಮಿ ಅವರೊಂದಿಗೆ ಆಗಮಿಸಿ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ಅಭಿವೃದ್ಧಿ ಪಡಿಸಿದ್ದು ನಾನು ಎಂದು ಸುಳ್ಳು ಹೇಳಿಕೆ ನೀಡಿದ್ದರು. ಇಂದು ಕೂಡ ಚುನಾವಣೆ ಪ್ರಚಾರ ಭಾಷಣದ ವೇಳೆ ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ಅಭಿವೃದ್ಧಿ ಪಡಿಸಿರುವುದಾಗಿ ಹೇಳಿ ಸಭೆಯಲ್ಲಿ ಸೇರಿದ್ದ ಸಾವಿರಾರು ಜನರಿಗೆ ಮರಳು ಮಾಡಲು ಮುಂದಾದರು.
ಆದರೆ ಶಾಸಕ ಎ. ಮಂಜು ತಮ್ಮ ಭಾಷಣದ ಸರದಿ ಬಂದಾಗ ಹಾಳಾಗಿದ್ದ ಹಾಸನ - ಪಿರಿಯಾಪಟ್ಟಣ ಮಾರ್ಗ ಹಾಗೂ ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆಯನ್ನು ನಾನು ಮಂತ್ರಿಯಾಗಿದ್ದಾಗ ಮಾಡಿಸಿದ್ದು ರೇವಣ್ಣ ಎಂದು ನಗುತ್ತಲೇ ಕೈಮುಗಿದು ರೇವಣ್ಣನವರ ಕಾಲೆಳೆದರು.

ಜನ ಈಗ ಬುದ್ದಿವಂತರಿದ್ದಾರೆ. ಯಾರು ಅಭಿವೃದ್ಧಿ ಮಾಡಿಸಿದ್ದರೆ ಎಲ್ಲವೂ ಗೊತ್ತಿರುತ್ತದೆ, ಚುನಾವಣೆ ಗಾಗಿ ಮತ ಹಾಕಿಸಿಕೊಳ್ಳಲು ಸುಳ್ಳು ಹೇಳಬಾರದು ರೇವಣ್ಣ, ನೀವು ಹೊಳೆನರಸೀಪುರ ಕ್ಕೆ ಅಭಿವೃದ್ಧಿ ಮಾಡಿಸಿದ್ದು ಇನ್ನು ಮುಂದು ಅರಕಲಗೂಡು ಅಭಿವೃದ್ಧಿಗಾಗಿಯೂ ಕುಮಾರಸ್ವಾಮಿ ಅವರ ಕೈಬಲಪಡಿಸುವ ಎಂದು ಎ. ಮಂಜು ಹೇಳಿದರು.

Post a Comment

0 Comments