ಅರಕಲಗೂಡು: ಕೃಷಿಯೊಂದಿಗೆ ಲಾಭದಾಯಕವಾಗಿ ರೈತರ ಆರ್ಥಿಕ ಅಭಿವೃದ್ದಿಗೆ ಹೈನುಗಾರಿಕೆ ಕೂಡ ಸಹಕಾರಿಯಾಗಿದೆ ಎಂದು ಶಾಸಕ ಎ. ಮಂಜು ಹೇಳಿದರು.
ಪಶುಪಾಲನಾ ಇಲಾಖೆ, ನ್ಯಾಯಾಂಗ ಇಲಾಖೆ ಹಾಗೂ ಅಣ್ಣಿಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ತಾಲ್ಲೂಕಿನ ಗಂಗನಾಳು ಗ್ರಾಮದಲ್ಲಿ ಸೋಮವಾರ ನಡೆದ ಜಾನುವಾರು ಜಾಗೃತಿ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹೈನುಗಾರಿಕೆ, ಮಿಶ್ರ ಬೆಳೆ ಪದ್ದತಿ ಕೈಗೊಂಡು ರೈತರು ತಮ್ಮ ಆದಾಯವನ್ನು ಹೆಚ್ಚುಮಾಡಿಕೊಳ್ಳಬೇಕು. ಅಗತ್ಯಕ್ಕೆ ತಕ್ಕಂತೆ ಅನುಕೂಲತೆಗಳನ್ನು ಮಾಡಿಕೊಳ್ಳದಿದ್ದರೆ ಕೃಷಿಕರ ಮಕ್ಕಳಿಗೆ ಯಾರೂ ಹೆಣ್ಣುಕೊಡಲು ಮುಂದಾಗುವುದಿಲ್ಲ. ಹೆಣ್ಣು ಮಕ್ಕಳ ಕುರಿತು ನಿಕೃಷ್ಟಭಾವನೆ ತಳೆದು ಭ್ರೂಣಹತ್ಯಗೆ ಮುಂದಾದ ಪರಿಣಾಮವನ್ನು ಇಂದು ಸಮಾಜ ಎದುರಿಸುತ್ತಿದೆ. ಸರ್ಕಾರದ ಯೋಜನೆಗಗಳ ಪ್ರಯೋಜನವನ್ನು ರೈತರು ಪಡೆದುಕೊಳ್ಳುವಂತೆ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಶ್ರೇಣಿ ನ್ಯಾಯಾಧೀಶ ಬಿ. ಕೆ. ನಾಗೇಶ ಮೂರ್ತಿ ಮನುಷ್ಯ ಹುಟ್ಟಿನಿಂದ ಸಾವಿನವರೆಗೂ ಕಾನೂನುಗಳ ಚೌಕಟ್ಟಿನಲ್ಲಿ ಬದುಕು ಸಾಗಿಸಬೇಕು ಹೀಗಾಗಿ ಪ್ರತಿಯೊಬ್ಬರೂ ಕಾನೂನಿನ ಅರಿವು ಪಡೆಯುವುದು ಅಗತ್ಯ. ಎಲ್ಲರಿಗೂ ನ್ಯಾಯ ದೊರಕಬೇಕು ಎಂಬ ಸದುದ್ದೇಶದಿಂದ ಬಡವರು, ಮಹಿಳೆಯರು ಮತ್ತು ಮಕ್ಕಳಿಗೆ ಉಚಿತ ಕಾನೂನು ನೆರವು ಪಡೆಯುವ ಸೌಲಭ್ಯವನ್ನು ಒದಗಿಸಲಾಗಿದೆ ಎಂದರು.
ಬೆಂಗಳೂರಿನ ಗ್ಯಾಸ್ಟ್ರೋ ತಜ್ಞ ಡಾ.ಅಂಜನಪ್ಪ ಆರೋಗ್ಯ ರಕ್ಷಣೆ ಕುರಿತು, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಕೆ.ಆರ್. ರಮೇಶ್ ಬರಗಾಲದ ಸಮಯದಲ್ಲಿ ಜಾನುವಾರು ಮತ್ತು ಮೇವಿನ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಆರ್. ವಿಜಯಕುಮಾರ್ ಮಾತನಾಡಿದರು.
ಸಿವಿಲ್ ನ್ಯಾಯಾಧೀಶರಾದ ಪ್ರೀತಿ ಎಲ್ ಮಳವಳ್ಳಿ, 2ನೇ ಹೆಚ್ಚವರಿ ನ್ಯಾಯಾಧೀಶ ಎಂ.ರಘು, ಗ್ರಾಪಂ ಅಧ್ಯಕ್ಷರಾದ ಗೌರಮ್ಮ, ರೂಪೇಶ್ ಕುಮಾರ್, ತಾಪಂ ಇಒ ಡಾ. ಎಚ್.ಇ.ಅಶೋಕ್, ಮುಖ್ಯ ಪಶುವೈದ್ಯಾಧಿಕಾರಿ ಡಾ ಎ.ಡಿ.ಶಿವರಾಮ್. ಸಮಾಜ ಸೇವಕ ಗಾಂಧಿನಗರ ದಿವಾಕರ್, ಮುಖಂಡರಾದ ಎಂ.ಜಿ.ರಾಜೇಗೌಡ, ನರಸೇಗೌಡ, ಮುತ್ತಿಗೆ ರಾಜೇಗೌಡ, ಎಂ.ಎಸ್. ಯೋಗೇಶ್ ಉಪಸ್ಥಿತರಿದ್ದರು. ಉಚಿತ ಜಾನುವಾರ ತಪಾಸಣಾ ಶಿಬಿರದಲ್ಲಿ ವೈದ್ಯರಾದ ಡಾ. ನಾಗರಾಜ್, ಡಾ ಭಾಗ್ಯ, ಡಾ ಬಿ.ಪಿ.ರವಿಕುಮಾರ್, ಡಾ ಜಯಶಂಕರ್, ಡಾ. ಎಸ್.ಎಂ.ದಿಲೀಪ್, ಡಾ.ಬಿ.ಎಸ್.ಪವನ್, ಡಾ.ಕೆ.ಎಸ್.ಚೇತನ್ ಕುಮಾರ್, ಡಾ ಬಿ.ಆರ್.ಚಿರಂಜೀವಿ ಚಿಕಿತ್ಸೆ ಮತ್ತು ಸಲಹೆ ನೀಡಿದರು. ಮಿಶ್ರತಳಿ ಕರುಗಳ ಪ್ರದರ್ಶನ ಮತ್ತು ವಿವಿಧ ಸವಲತ್ತುಗಳ ವಿತರಣೆ ನಡೆಯಿತು.
ಅರಕಲಗೂಡು: ರಾಜ್ಯದಲ್ಲಿ ಪಶು ವೈದ್ಯರ ಕೊರತೆ ತೀವ್ರವಾಗಿದೆ, ತಾಲ್ಲೂಕಿನಲ್ಲಿ 24 ವೈದ್ಯರಿಗೆ ಕೇವಲ 4 ಮಂದಿ ವೈದ್ಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೆರಿಟ್ ಆಧಾರದ ಮೇಲೆ ವೈದ್ಯರ ನೇರ ನೇಮಕಾತಿಗೆ ಸರ್ಕಾರ ಮುಂದಾಗಬೇಕು ಎಂದು ಶಾಸಕ ಎ. ಮಂಜು ಸರ್ಕಾರವನ್ನು ಒತ್ತಾಯಿಸಿದರು. ಪಶು ವೈದ್ಯರ ನೇಮಕಾತಿಯನ್ನು ಕೆಪಿಎಸ್ ಸಿಗೆ ವಹಿಸುವುದಾಗಿ ಹೇಳುತ್ತಿದ್ದು ಈ ನಿರ್ಧಾರ ಸರಿಯಲ್ಲ. ಇದರಿಂದ ತೊಂದರೆಯೆ ಹೆಚ್ಚು ಸದನದಲ್ಲಿ ಈ ಕುರಿತು ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.
0 Comments