ಅರಕಲಗೂಡು: ಕ್ಷೇತ್ರದಲ ಅಭಿವೃದ್ಧಿ ಎಂಎಲ್ ಎ ಹೊಣೆ, ಅಂದ ಹಾಗೆ ಕಾಮಗಾರಿಗಳಿಗೆ ಬಜೆಟ್‌ನಲ್ಲಿ ಒಂದು ರೂಪಾಯಿ ಅನುದಾನ ತರಲಾಗದ ಶಾಸಕ ಎ. ಮಂಜು ಯಾವ ನೈತಿಕತೆ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ಪಿ. ಶ್ರೀಧರ್‌ಗೌಡ ಪ್ರಶ್ನಿಸಿದರು.
ತಾಲೂಕಿನ ಬೇಲಿಕರ್ಪೂರವಳ್ಳಿ ಗ್ರಾಮದಲ್ಲಿ 15 ದಲಿತ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಹಿನ್ನಲೆಯಲ್ಲಿ ಸೋಮವಾರ ಗ್ರಾಮಸüರಿಂದ ಸನ್ಮಾನ ಸ್ವೀಕರಿಸಿ ನೀಡಿ ಮಾತನಾಡಿದ ಅವರು, ಬಜೆಟ್‌ನಲ್ಲಿ ಒಂದು ರೂಪಾಯಿ ಅನುದಾನ ಒದಗಿಸಿಲ್ಲ ಎಂದು ಶಾಸಕರು ತಮ್ಮ ದೌರ್ಬಲ್ಯವನ್ನು ಅಧಿವೇಶನದಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ ಕ್ಷೇತ್ರದ ಜನತೆ ಇವರನ್ನು ಚುನಾಯಿಸಿದ್ದು ಏಕೆ ಎಂಬ ಪ್ರಶ್ನೆ ಕಾಡುತ್ತಿದೆ. ಒಂದು ರೂಪಾಯಿ ಅನುದಾನ ತರಲಾಗದ ಶಾಸಕರು ತಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ಮತದಾರರಿಗೆ ಬಗೆದ ದ್ರೋಹವಾಗಿದೆ ಎಂದು ಎಂದು ಕಿಡಿಕಾರಿದರು.
ಬೇಲಿಕರ್ಪೂರವಳ್ಳಿ ಗ್ರಾಮದ ಕೆಲವು ಮನೆಗಳಿಗೆ ಇಂದಿಗೂ ವಿದ್ಯುತ್ ಸೌಲಭ್ಯ ಒದಗಿಸಿರಲಿಲ್ಲ, ಕ್ಷೇತ್ರದಲ್ಲಿ ಹಲವಾರು ಹಳ್ಳಿಗಳಿಗೆ ಮೂಲಭೂತ ಸೌಲಭ್ಯಗಳನ್ನೇ ನೀಡಿಲ್ಲ. ಕನಿಷ್ಠ ಡಿಪ್ಲೋಮೋ ಕಾಲೇಜು ತರಲು ಸಾಧ್ಯವಾಗಿಲ್ಲ. ಹಾಲಿ ಮತ್ತು ಮಾಜಿ ಶಾಸಕರು ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕಳೆದ ನಲವತ್ತು ವರ್ಷಗಳಿಂದ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಇದೀಗ ಬೇಲಿಕರ್ಪೂರವಳ್ಳಿ ಗ್ರಾಮಸ್ಥರ ಮನವಿ ಮೇರೆಗೆ ಕೇವಲ ಇಪ್ಪತ್ತು ದಿನಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇನೆ, ಇಷ್ಟು ವರ್ಷಗಳ ಕಾಲ ಜನರ ಸಮಸ್ಯೆಗಳನ್ನು ಬಗೆಹರಿಸಲು ಹಾಲಿ ಮತ್ತು ಮಾಜಿ ಶಾಸಕರಿಗೆ ಏಕೆ ಸಾಧ್ಯವಾಗಲಿಲ್ಲ, ಮತದಾರರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಾರಿಗೆ ಸಚಿವರೊಂದಿಗೆ ಸಮಾಲೋಚನೆ ನಡೆಸಿ ತಾಲೂಕಿನ ದುಮ್ಮಿ ಗ್ರಾಮಕ್ಕೆ ಹೊಸದಾಗಿ ಸಾರಿಗೆ ಬಸ್ ಸೇವೆ ಆರಂಭಿಸಿದ್ದೆ. ಶಿಷ್ಟಾಚಾರ ಉಲ್ಲಂಘನೆ ನೆಪದಲ್ಲಿ ಶಾಸಕರು ಬಸ್ ಸೌಲಭ್ಯಕ್ಕೆ ತಡೆಯೊಡ್ಡಿದ್ದರು. ಈಗ ಈ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು ಇದಕ್ಕೂ ಶಿಷ್ಟಾಚಾರದ ಹೆಸರು ಹೇಳಿಕೊಂಡು ತಡೆ ನೀಡಬೇಡಿ ಎಂದು ಶಾಸಕರಿಗೆ ಛೇಡಿಸಿದರು.
ಹಾಸನ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೇಯಸ್ ಪಟೇಲ್ ಅವರನ್ನು ಘೋಷಣೆ ಮಾಡಿರುವುದು ಸ್ವಾಗತಾರ್ಹ, ಇವರ ಗೆಲುವಿಗೆ ಎಲ್ಲ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಕಾರಣಕ್ಕಾಗಿ ಗ್ರಾಮಸ್ಥರು ಶ್ರೀಧರ್‌ಗೌಡ ಅವರನ್ನು ಮಂಗಳವಾದ್ಯಗಳೊAದಿಗೆ ಅದ್ದೂರಿಯಾಗಿ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದರು.
ಮುಖಂಡರಾದ ಲಕ್ಷö್ಮಣ್, ವೆಂಕಟೇಶ್, ಗಣೇಶ್ ವೇಲಾಪುರಿ, ರಂಜಿತ್ ಗೊರೂರು, ಚಂದ್ರಣ್ಣ, ದ್ಯಾವಪ್ಪ, ನಿಂಗರಾಜು, ಹೊನ್ನಾಜಣ್ಣ, ಭರಮರಾಜು, ಕಾಂತರಾಜು, ಸಣ್ಣಪ್ಪ, ಪ್ರಸನ್ನ, ಧರ್ಮ, ಲಿಂಗರಾಜು, ವೀರಣ್ಣ, ಪುಟ್ಟಯ್ಯ, ನವೀನ್, ದೇವರಾಜು, ಹರೀಶ, ಸಾಗರ್, ರಾಧಾಕೃಷ್ಣ, ರಾಜೇಗೌಡ, ಬಂಗಾರಪ್ಪ, ಮಲ್ಲೇಶ್, ವೀರಪ್ಪಾಜಿ ಇತರರಿದ್ದರು.
0 Comments