ಶಣವಿನಕುಪ್ಪೆ: ಶ್ರೀ ವೀರಾಂಜನೇಯಸ್ವಾಮಿ ಮಂಡಲ ಪೂಜೆ, ನಗೆಹಬ್ಬ, ಮಿಮಿಕ್ರಿ ಮ್ಯಾಜಿಕ್

ಅರಕಲಗೂಡು: ತಾಲೂಕಿನ ದೊಡ್ಡಮಗ್ಗೆ ಹೋಬಳಿ ಶಣವಿನಕುಪ್ಪೆ ಗ್ರಾಮದಲ್ಲಿ ಉದ್ಘಾಟನೆ ಭಾಗ್ಯ ಕಂಡಿರುವ ಶ್ರೀ ಅಂಜನೇಯಸ್ವಾಮಿ ದೇವಸ್ಥಾನದ ಮಂಡಲ ಪೂಜಾ ಮಹೋತ್ಸವ ಜ. 16ರಂದು ನೆರವೇರಲಿದೆ.

ಪುರಾತನ ಕಾಲದ ಶ್ರೀ ಅಂಜನೇಯಸ್ವಾಮಿ ದೇವಸ್ಥಾನ ಶಿಥಿಲಗೊಂಡಿದ್ದರಿಂದ ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ಹೊಸಾದಾಗಿ ಕಾಯಕಲ್ಪ ಕಂಡು ಲೋಕಾರ್ಪಣೆಯಾದ ಹಿನ್ನಲೆಯಲ್ಲಿ ನಡೆಯುವ 48ನೇ ದಿನದ ಮಂಡಲ ಪೂಜೆ ಪ್ರಯುಕ್ತ ಬೆಳಗ್ಗೆ ದೇವರಿಗೆ ರುದ್ರಾಭಿಷೇಕ, ಹೋಮ, ಮಹಾ ಮಂಗಳಾರತಿ ನಡೆಯಲಿದೆ.

ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಹಾಸನ ಆದಿ ಚುಂಚನಗಿರಿ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಲಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಎಚ್.ಡಿ. ರೇವಣ್ಣ, ಎ. ಮಂಜು, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಜೆಡಿಎಸ್ ಮುಖಂಡರಾದ  ಎಂ.ಎಸ್. ರಮೇಶ್, ಹೊನ್ನವಳ್ಳಿ ಸತೀಶ್, ಗಾಂಧಿನಗರ ದಿವಾಕರ್ ಮೊದಲಾದ ಗಣ್ಯರು ಭಾಗವಹಿಸುವರು.

ಧಾರ್ಮಿಕ ಸಭೆ ನಂತರ ಸಂಜೆ ಪ್ರೊ. ಕೃಷ್ಣೇಗೌಡ ಅವರಿಂದ ನಗೆಹಬ್ಬ, ಮಿಮಿಕ್ರಿ ಗೋಪಿ ಮತ್ತು ಗಿರೀಶ್ ಆರಾಧ್ಯ ಅವರಿಂದ ಹಾಸ್ಯ ಮಾತನಾಡುವ ಕೋತಿ ಮತ್ತು ಮ್ಯಾಜಿಕ್ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ಗ್ರಾಮದ ಶ್ರೀ ವೀರಭದ್ರೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಸಂತೋಷ್ ಶಣವಿನಕುಪ್ಪೆ ಸುದ್ದಿಗಾರರಿಗೆ ತಿಳಿಸಿದರು.

Post a Comment

0 Comments