ಅರಕಲಗೂಡು: ಅಸಮರ್ಪಕ ವಿದ್ಯುತ್ ಸಮಸ್ಯೆ ನಿವಾರಿಸಿ ರೈತರಿಗೆ ಬರ ಪರಿಹಾರವನ್ನು ಸಮರ್ಪಕವಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಶಾಸಕ ಎ. ಮಂಜು ಮಂಗಳವಾರ ರೈತ ಸಂಘ ಮತ್ತು ಜೆಡಿಎಸ್ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಎರಡು ಸಾವಿರ ಮೇಘಾವ್ಯಾಟ್ ವಿದ್ಯುತ್ ಬೇಕು ಸಮಪರ್ಕಕವಾಗಿ ವಿದ್ಯುತ್ ಪೂರೈಕೆ ಮಾಡದೆ ಸರ್ಕಾರ ರೈತರ ಹಿತವನ್ನು ನಿರ್ಲಕ್ಷಿö್ಯಸುತ್ತಿದೆ. ಬರಗಾಲ ತಾಂಡವಾಡುತ್ತಿದ್ದು ರೈತರು ಒಣಗುತ್ತಿರುವ ಬೆಳೆಗಳಿಗೆ ನೀರು ಹಾಯಿಸಿಕೊಳ್ಳಲು ಇತ್ತ ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ. ಬರಗಾಲದಿಂದಾಗಿ ಬೆಳೆ ಕಳೆದುಕೊಂಡಿರುವ ರೈತರಿಗೆ ವೈಜ್ಞಾನಿಕವಾಗಿ ಪರಿಹಾರ ನೀಡಿ ಅನ್ನದಾತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ಅಂಕಿ ಅಂಶಗಳ ಮೂಲಕ ಪರಿಹಾರ ಬಿಡುಗಡೆ ಮಾಡಿರುವುದಾಗಿ ಸುಳ್ಳು ಹೇಳುತ್ತಿವೆ ಹೊರತು ರೈತರ ಖಾತೆಗೆ ಹಣ ಮಾತ್ರ ಜಮೆ ಆಗಿಲ್ಲ. ವಿದ್ಯುತ್ ಪರಿವರ್ತಕ ನೀಡಲು ಹಣ ಪೀಕಲಾಗುತ್ತಿದೆ. ಸರ್ಕಾರ ಬೋರ್‌ವೆಲ್ ಕೊರೆಸಿಕೊಂಡ ರೈತರಿಗೆ ನೀಡುತ್ತಿದ್ದ ಮೂಲ ಸೌಕರ್ಯಗಳಿಗೆ ಕತ್ತರಿ ಹಾಕಿ ಸೋಲಾರ ವ್ಯವಸ್ಥೆ ಜಾರಿಗೊಳಿಸಲು ಹೊರಟಿರುವುದು ಖಂಡನೀಯ ಎಂದು ಆರೋಪಿಸಿದರು.
ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಕೆ. ಸತೀಶ್, ನರಸೇಗೌಡ, ಎಂ.ಎಸ್. ಯೋಗೇಶ್, ಸಂತೋಷ್‌ಗೌಡ, ಮುತ್ತಿಗೆ ರಮೇಶ್, ದಿವಾಕರ್, ಚೋಳೇನಹಳ್ಳಿ ದಿನೇಶ್, ನಂದಕುಮಾರ್, ಶಶಿಕುಮಾರ್, ಮುತಾಹಿರ್ ಪಾಷಾ, ಬಾಣದಹಳ್ಳಿ ಗಣೇಶ್, ರವಿಕುಮಾರ್, ಕಾಕೋಡನಹಳ್ಳಿ ಮಂಜು, ಚನ್ನಕೇಶವೇಗೌಡ, ಲೋಕನಾಥ್, ಸೋಮಶೇಖರ್, ರೈತ ಸಂಘದ ಶಶಿಕಲಾ, ಮುಗಳೂರು ಕೃಷ್ಣೇಗೌಡ, ಸೀಬಳ್ಳಿ ಲೋಕೇಶ್, ಶಿವಕುಮಾರ್, ವೇದಾನಂದ, ಲೋಕೇಶ್, ಕಿರಣ್ ಕುಮಾರ್, ಚಂದ್ರು, ಜಗದೀಶ್ ಇತರರು ಪಾಲ್ಗೊಂಡಿದ್ದರು.
0 Comments