ಗಂಗಾವತಿ ಪ್ರಾಣೇಶ್ ನಗೆ ಹಬ್ಬದಲ್ಲಿ ನಕ್ಕು ನಲಿದು ಮಿಂದೆದ್ದ ಜನಸ್ತೋಮ

ಅರಕಲಗೂಡು: ಭಕ್ತರಿಂದ ತುಂಬಿರುತ್ತಿದ್ದ ಅರಸೀಕಟ್ಟೆ ಅಮ್ಮ ದೇವಸ್ಥಾನದಲ್ಲಿ ಬುಧವಾರ ಜನರ ನಗುವಿಗೆ ಪಾರವೇ ಇರಲಿಲ್ಲ,

ಹೌದು ತಾಲೂಕಿನ ಶ್ರೀ ಅರಸೀಕಟ್ಟೆ ಅಮ್ಮ ದೇವಸ್ಥಾನ ಸನ್ನಿಧಿಯಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಪ್ರಸ್ತುತ ಪಡಿಸಿದ ನಗೆ ಹಬ್ಬ ಜನಮನ ಸೂರೆಗೊಂಡು ಮಿಂದೆದ್ದರು.

ಅರಸೀಕಟ್ಟೆ ಅಮ್ಮ ದೇವಸ್ಥಾನ ಸಮಿತಿ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನಪದ ಕಲಾವಿದ ದೇವಾನಂದ ವರ ಪ್ರಸಾದ್ ಮತ್ತು ಕಲಾ ತಂಡದವರು ಪ್ರಸ್ತುತ ಪಡಿಸಿದ ಜನಪದ ಹಬ್ಬ ಜನರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದ ಕೇಂದ್ರಬಿAದುವಾಗಿದ್ದ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ತಂಡದವರು ಹಾಸ್ಯಮಯ ದಾಟಿಯಲ್ಲಿ ನಡೆಸಿಕೊಟ್ಟ ನಗೆ ಹಬ್ಬ ನೆರೆದಿದ್ದ ಜನರನ್ನು ಸೂಜಿಗಲ್ಲಿನಂತೆ ಸೆಳೆದು ನಗೆಗಡಲಲ್ಲಿ ತೇಲಿಸಿತು.

ಮೊದಲಿಗೆ ಗಂಗಾವತಿ ಪ್ರಾಣೇಶ್ ತಂಡದ ಕಲಾವಿದರಾದ ಬಸವರಾಜು ಮಹಾಮನಿ, ನರಸಿಂಹ ಜೋಷಿ ಅವರು ಹಾಸ್ಯ ತುಣುಕುಗಳ ಮೂಲಕ ಜನರಲ್ಲಿ ನಗು ಉಕ್ಕಿಸಿ ಚಪ್ಪಾಳೆ ಗಿಟ್ಟಿಸಿದರು.

ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಮಿತಿ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಾದ ಬಿ.ಎನ್. ರಾಮಸ್ವಾಮಿ, ಆಟೋ ಚಾಲಕ ಹೊಳೆನರಸೀಪುರ ಹನುಮಂತ, ಸಾಹಿತಿ ಗೊರೂರು ಅನಂತರಾಜು, ನಿವೃತ್ತ ಶಿಕ್ಷಕಿ ಗೀತಾ, ದೇವಾನಂದ ವರಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆಯಾದ ಏಳು ಕ್ರೀಡಾಪಟು ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂ ಸಹಾಯ ಧನ ವಿತರಿಸಿ ಪ್ರೋತ್ಸಾಹಿಸಲಾಯಿತು.
ದೊಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ಹಾಗೂ ಸಮಿತಿ ಅಧ್ಯಕ್ಷ ಎ.ಟಿ. ರಾಮಸ್ವಾಮಿ, ಕಾರ್ಯದರ್ಶಿ ಮಾದಾಪುರ ಕೃಷ್ಣೇಗೌಡ ಮಾತನಾಡಿದರು. ಅರೇಮಾದನಹಳ್ಳಿ ಮಠದ ಶ್ರೀ ಶಿವ ಸುಜ್ಞಾನ ತೀರ್ಥ ಸ್ವಾಮೀಜಿ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ, ಬಸವಾಪಟ್ಟಣ ತೋಂಟದಾರ್ಯ ಮಠದ ಶ್ರೀ ಬಸವಲಿಂಗ ಶಿವಯೋಗಿ, ಶ್ರೀ ಮಹಾಂತ ಸ್ವಾಮೀಜಿ ಇದ್ದರು.

Post a Comment

0 Comments