ಅರಕಲಗೂಡು: ತಾಲೂಕಿನಲ್ಲಿ ರೈತರ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಶಾಸಕ ಎ. ಮಂಜು ಆಕ್ರೋಶ ಹೊರಹಾಕಿದರು.
ತಾಲೂಕು ಆಡಳಿತದಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ಆಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ, ಏಜೆಂಟ್ಗಳನ್ನು ಇಟ್ಟುಕೊಂಡು ದಂದೆ ನಡೆಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಶಾಸಕ ಎ. ಮಂಜು ಪ್ರತಿಭಟನೆ ವೇಳೆ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಅವರ ವಿರುದ್ದ ಗುಡುಗಿದರು.
0 Comments