ಸರ್ಕಲ್ ಇನ್ಸ್ ಪೆಕ್ಟರ್ ಗೆ ಎಚ್ಚರಿಕೆ ಕೊಡಲು ಎ. ಮಂಜು ತಾಕೀತು

ಅರಕಲಗೂಡು: ಜನರಿಗೆ ಪೊಲೀಸರು ಫೋನ್ ಕರೆ ಮಾಡಿ ಧಮ್ಕಿ ಹಾಕಿ ಬೆದರಿಸುತ್ತಿದ್ದಾರೆ, ಇದು ಸರಿಯಲ್ಲ  ಎಂದು ಶಾಸಕ ಎ. ಮಂಜು ಎಚ್ಚರಿಕೆ ನೀಡಿದರು.

ಸಾರ್ವಜನಿಕರಿಗೆ ರಕ್ಷಣೆ ಕೊಡಬೇಕಾದ ಪೊಲೀಸರು ಜನಸಾಮಾನ್ಯರ ಮೇಲೆ ರಾಕ್ಷಸರಂತೆ ವರ್ತಿಸುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ದೂರುಗಳು ವ್ಯಾಪಕವಾಗಿವೆ.

 ಕಾನೂನಿಗೆ ವಿರುದ್ದವಾಗಿ ವರ್ತಿಸುತ್ತಾ ಪೊಲೀಸರು ಜನರಿಗೆ ಕೇಸು ಹಾಕುವುದಾಗಿ ಧಮ್ಕಿ ಹಾಕುವುದನ್ನು ನಿಲ್ಲಿಸದೆ ಇದೇ ರೀತಿ ದುರ್ವತನೆ ಮುಂದುವರಿಸಿದರೆ ಸಾರ್ವಜನಿಕರು ಪೊಲೀಸ್ ಇಲಾಖೆ ವಿರುದ್ದ ಬೀದಿಗಿಳಿಯುತ್ತಾರೆ.

ಸರ್ಕಲ್ ಇನ್ಸ್ಪೆಕ್ಟರ್ ಕರೆಸಿ ಖಡಕ್ಕಾಗಿ ಎಚ್ಚರಿಕೆ ನೀಡುವಂತೆ ಶಾಸಕ ಎ. ಮಂಜು ಅವರು ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಅವರಿಗೆ ತಾಕೀತು ಮಾಡಿದರು.

Post a Comment

0 Comments