ಪಶು ಚಿಕಿತ್ಸಾಲಯ ಸ್ಥಳಾಂತರಿಸದಂತೆ ದನಗಳನ್ನು ಕಟ್ಟಿ ರಸ್ತೆ ತಡೆಸು ರೈತರು ಪ್ರತಿಭಟನೆ

ಅರಕಲಗೂಡು: ಪಟ್ಟಣದ ಅನಕೃ ವೃತ್ತದಲ್ಲಿರುವ ಪಶು ಚಿಕಿತ್ಸಾಲಯವನ್ನು ಸ್ಥಳಂತರ ಮಾಡಿರುವುದನ್ನು ಖಂಡಿಸಿ ಪಟ್ಟಣದ ಸುತ್ತಮುತ್ತಲಿನ ರೈತರು ಅನಕೃ ವೃತ್ತದಲ್ಲಿ ಹಸುಗಳನ್ನು ಕಟ್ಟಿ, ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದರು.

ಶುಕ್ರವಾರ ಬೆಳಿಗ್ಗೆ ಹಸುಗಳೊಂದಿಗೆ ಪಟ್ಟಣಕ್ಕೆ ಅಗಮಿಸಿದ ನೂರಾರು ಮಂದಿ ರೈತರು, ಅನಕೃ ವೃತ್ತದ ಬಳಿ ಹಸುಗಳನ್ನು ಕಟ್ಟಿ, ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

 ಪಟ್ಟಣದ ಸುತ್ತಮುತ್ತಲಿನ ಹೊನ್ನವಳ್ಳಿ, ನೈಗೆರೆ, ಗರಿಗಟ್ಟ, ಕೆಲ್ಲೂರು, ಅರಕಲಗೂಡು ಪಟ್ಟಣ, ಕುರುಬಗೇರಿ, ಮಾಚಗೌಡನಹಳ್ಳಿ, ಪಾರಸನಹಳ್ಳಿ, ಮೊಕಳಿ, ಮಳ್ಳಿಕೆರೆ, ವಡ್ಡರಕೊಪ್ಪಲು, ಕಣಿವೆ ಕಾವಲು, ತೇಜೂರು, ರಮೇನಹಳ್ಳಿ, ಗುಂಡಿಕೊಪ್ಪಲು, ಹಂಪಾಪುರ, ಕತ್ತಿಮಲ್ಲೇನಹಳ್ಳಿ ಮತ್ತಿತರೆ ಗ್ರಾಮಗಳ ರೈತರು, ಹೆಂಗಸರು ಹಸುಗಳನ್ನು ಪಟ್ಟಣಕ್ಕೆ ಹೊಡೆದುಕೊಂಡು ಬಂದು ಚಿಕಿತ್ಸೆ ಕೊಡಿಸಿಕೊಂಡು ಹೋಗುತ್ತಿದ್ದಾರೆ.
ಆದರೆ, ಈ ಚಿಕಿತ್ಸಲಯವನ್ನು ಮಲ್ಲಿಪಟ್ಟಣ ರಸ್ತೆಗೆ ಸ್ಥಳಂತರಿಸಿದ್ದು, 3-4 ಕಿಲೋಮೀಟರ್ ದೂರವಿರುವುದರಿಂದ ವಯಸ್ಸಾದವರು, ಹೆಂಗಸರು ಹಸುಗಳನ್ನು ಹೊಡೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುವುದಿಲ್ಲ. ಹಾಗಾಗಿ ಈ ಆಸ್ಪತ್ರೆಯನ್ನು ಸ್ಥಳಂತರ ಮಾಡುವುದು ಬೇಡ. ಈ ಆಸ್ಪತ್ರೆ ಇಲ್ಲೇ ಇರಲಿ. ವೈದ್ಯರು, ಸಿಬ್ಬಂದಿ ನೇಮಕ ಮಾಡಲಿ. ಈ ಆಸ್ಪತ್ರೆ ಪಟ್ಟಣದ ಕೇಂದ್ರಬಿಂದುವಿನಲ್ಲಿ ಇರುವುದರಿಂದ ಎಲ್ಲಾ ರೈತರಿಗೂ ಅನುಕೂಲ ವಾಗಲಿದೆ ಎಂದು ಮನವಿ ಮಾಡಿದರು. ಪ್ರತಿಭಟನೆಯಿಂದ ಸುಮಾರು 1 ಗಂಟೆಗೂ ಹೆಚ್ಚು ಕಾಲ ರೈತರು ರಸ್ತೆ ತಡೆ ನಡೆಸಿದ್ದರಿಂದ ವಾಹನಗಳು ಸಾಲುಗಟ್ಟಿ ನಿಟ್ಟಿದ್ದವು.

ಗ್ರೇಡ್ 2 ತಹಶೀಲ್ದಾರ್, ಮೋಹನ್ ಮತ್ತು ಪಶು ಇಲಾಖೆ ಪ್ರಭಾರ ಉಪ ನಿರ್ದೆಶಕ ಡಾ ದಿಲೀಪ್   ಪ್ರತಿಭಟನಾ ನಿರತ ರೈತರೊಂದಿಗೆ ಚರ್ಚಿಸಿ  ಹಿರಿಯ ಅಧಿಕಾರಿಗಳು ರಜೆಯಲ್ಲಿದ್ದಾರೆ.  ಮುಂದಿನ ಶುಕ್ರವಾರ ರೈತರ ಸಭೆ ನಡೆಸಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯ ವರೆಗೆ  ಹಳೆಯ  ಆಸ್ಪತ್ರೆಯಲ್ಲೆ ಚಿಕಿತ್ಸೆ ಮುಂದುವರೆಸುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು. ಮುಖಂಡರಾದ  ಯೋಗೇಶ್, ಭಾಸ್ಕರ್, ರವಿಕುಮಾರ್, ನಿಂಗರಾಜ್  ಪ್ರತಿಭಟನೆಯ ನೇತೃತ್ವ ವಹಿಸಿದ್ದರು

Post a Comment

0 Comments