ಕೊಣನೂರು; ಮೂವರೂ ದುರಂತ ಅಂತ್ಯ


ಅರಕಲಗೂಡು: ತಾಲೂಕಿನ ಕೊಣನೂರಿನಲ್ಲಿ ನಡೆದ ಗ್ಯಾಸ್ ದುರಂತದಲ್ಲಿ ಬದುಕುಳಿದಿದ್ದ ಮೀನಾಕ್ಷಮ್ಮ ಕೂಡ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಇದರೊಂದಿಗೆ ಮೂವರು ಗಾಯಾಳುಗಳು ಗ್ಯಾಸ್ ದುರಂತದಲ್ಲಿ ಅಂತ್ಯ ಕಂಡಂತಾಗಿದೆ. ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ ತಿಥಿ ಕಾರ್ಯದಲ್ಲಿ ಅಡುಗೆ ಮಾಡುತ್ತಿದ್ದಾಗ ಮೀನಾಕ್ಷಮ್ಮ ಗಾಯಾಳಾಗಿದ್ದರು.
ಸಿಲಿಂಡರ್ ಗ್ಯಾಸ್ ಸೋರಿಕೆಯಾಗಿ ಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಂಗಳಮ್ಮ (48), ರಾಧಮ್ಮ (62) ಮೃತರು. ತಮ್ಮ ಅತ್ತೆ ಕರಿಯಮ್ಮ ಅವರು ನಿಧನ ಹೊಂದಿದ ಹಿನ್ನಲೆಯಲ್ಲಿ ಕಳೆದ ಭಾನುವಾರ ಮೃತರ ತಿಥಿ ಕಾರ್ಯಕ್ಕಾಗಿ ಅಡುಗೆ ಮಾಡುತ್ತಿದ್ದಾಗ ಸಿಲಿಂಡರ್ ಗ್ಯಾಸ್ ಸೋರಿಕೆಯಾಗಿ ಸೋಸೆಯರಾದ ಮಂಗಳಮ್ಮ, ರಾಧಮ್ಮ ಹಾಗೂ ಸಂಬಂಧಿಕರಾದ ಮೀನಾಕ್ಷಮ್ಮ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನಾ ಸ್ಥಳಕ್ಕೆ ಕೊಣನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದರು. 
ಗಾಯಾಳು ಮಂಗಳಮ್ಮ ಮಂಗಳವಾರ ಮೃತಪಟ್ಟರು. ಬುಧವಾರ ರಾಧಮ್ಮ ಅಸುನೀಗಿದ್ದಾರೆ. ಇಂದು ಮೀನಾಕ್ಷಮ್ಮ ಕೂಡ ಸಾವನ್ನಪ್ಪಿರುವುದು ಶೋಚನೀಯವಾಗಿದೆ.

Post a Comment

0 Comments