ಅರಕಲಗೂಡು: ಗ್ರಾಮೀಣ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರಗಳು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಖಾಸಗಿ ಕಾನ್ವೆಂಟ್‌ಗಳಲ್ಲಿ ಸಿಗುವ ಸವಲತ್ತುಗಳಿಗಿಂದ ಮಿಗಿಲಾದ ಸೌಕರ್ಯಗಳನ್ನು ಒದಗಿಸಲು ಸರ್ಕಾರದೊಂದಿAಗೆ ಸಂಘ ಸಂಸ್ಥೆಗಳು ಹಾಗೂ ದಾನಿಗಳು ಮುಂದಾಗುವುದು ಒಳಿತು ಎಂದು ಗ್ರಾಮೀಣ ಕೂಟ ಕೊಣನೂರು ವಲಯ ವ್ಯವಸ್ಥಾಪಕ ಸುನಿಲ್ ಸಲಹೆ ಮಾಡಿದರು.
ತಾಲೂಕಿನ ಬೆಟ್ಟಸೋಗೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಗ್ರಾಮೀಣ ಕೂಟದ ಕೊಣನೂರು ಶಾಖಾ ವತಿಯಿಂದ ಇತ್ತೀಚೆಗೆ ಮಕ್ಕಳಿಗೆ ಕುರ್ಚಿಗಳು ಮತ್ತು ಜಮಕಾನ್‌ಗಳನ್ನು ಕೊಡುಗೆಯಾಗಿ ವಿತರಿಸಿ ಮಾತನಾಡಿದ ಅವರು, ಸರ್ಕಾರ ಅಂಗನವಾಡಿ ಮಕ್ಕಳಿಗೆ ಅನೇಕ ಸವಲತ್ತುಗಳನ್ನು ಕಲ್ಪಿಸಿದೆ. ಈ ನಡುವೆಯೂ ಉತ್ತಮ ಸೌಲಭ್ಯಗಳಿವೆ ಎನ್ನುವ ಭಾವನೆಯಿಂದ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಕಾನ್ವೆಂಟ್‌ಗಳಿಗೆ ಸೇರಿಸಲು ಆಸಕ್ತಿ ತೋರುತ್ತಿದ್ದಾರೆ. ಇಂತಹ ಮನೋಭಾವನೆಯನ್ನು ಹೋಗಲಾಡಿಸಿ ಅಂಗನವಾಡಿ ಕೇಂದ್ರಗಳಿಗೂ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸುವ ಉದ್ದೇಶವನ್ನು ಗ್ರಾಮೀಣ ಕೂಟ ಈಡೇರಿಸುತ್ತಿದೆ ಎಂದರು.
ಗ್ರಾಮೀಣ ಕೂಟದ ಕೊಣನೂರು ಶಾಖಾ ವ್ಯವಸ್ಥಾಪಕ ಕೆಂಪರಾಜು ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಮೇಲ್ವಿಚಾರಕಿ ಶೋಭಾ, ಗ್ರಾಪಂ ಸದಸ್ಯೆ ಅನುಷಾ ಯೋಗೇಶ್, ಅಂಗನವಾಡಿ ಕಾರ್ಯಕರ್ತೆ ಎಲ್.ಬಿ. ಮಂಜುಳಾ, ಸಹಾಯಕಿ ಮಣಿ ಸ್ವಾಮಿಗೌಡ, ಮಕ್ಕಳು ಇದ್ದರು.
0 Comments