ಅರಕಲಗೂಡು: ಸರ್ಕಾರದ ಸವಲತ್ತುಗಳು ಕಟ್ಟಕಡೆಯ ವ್ಯಕ್ತಿಗೆ ತಲುಪುವಂತಾಗಬೇಕು ಎಂದು ಬಸವಾಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಷಾ ಯೋಗೇಶ್ ತಿಳಿಸಿದರು.
ತಾಲೂಕಿನ ಬಸವಾಪಟ್ಟಣ ಗ್ರಾಪಂ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 2021- 2022ನೇ ಸಾಲಿನ ಪ್ರಥಮ ಗ್ರಾಮಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಹಾಗೂ ಸ್ಥಳೀಯ ಚುನಾಯಿತ ಪ್ರತಿಧಿಗಳು ಸಕ್ರೀಯ ಪಾಲ್ಗೊಳ್ಳುವಿಕೆ ಮುಖ್ಯ.
ಜನಸಾಮಾನ್ಯರು ಸಹ ಗ್ರಾಮಸಭೆ ಸದ್ಬಳಕೆ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಅರ್ಹರಿಗೆ ಸರ್ಕಾರಿ ಸವಲತ್ತು ಸುಲಭವಾಗಿ ದೊರಕಿದಾಗ ಮಾತ್ರ ಗ್ರಾಮಸಭೆಗೆ ಅರ್ಥ ಬರುತ್ತದೆ ಎಂದರು.
ನೊಡಲ್ ಅಧಿಕಾರಿ ಹಾಗೂ ಸಿಡಿಪಿಒ ಹರಿಪ್ರಸಾದ್ ಮಾತನಾಡಿ, ಮಕ್ಕಳ ಲೈಂಗಿಕ ಕಿರುಕುಳ, ಬಾಲಕಾರ್ಮಿಕ ಮತ್ತು ಬಾಲ್ಯ ವಿವಾಹದ ಬಗ್ಗೆ ಸಾರ್ವಜನಿಕರು ತಮ್ಮ ಗಮನಕ್ಕೆ ಬಂದ ಕೂಡಲೇ ಸಮೀಪದ ಪೋಲಿಸ್ ಠಾಣೆಗಾಗಲೀ ತಮ್ಮ ಇಲಾಖೆಯ ಗಮನಕ್ಕಾಗಲೀ ತರಬೇಕು ಎಂದು ಕೋರಿದರು.
ಗ್ರಾಪಂ ಪಿಡಿಒ ಮಂಜುನಾಥ್ ಮಾತನಾಡಿದರು. ಉಪಾಧ್ಯಕ್ಷೆ ರಾಣಿ, ಸದಸ್ಯರಾದ ವಸಂತಕುಮಾರ್, ಪ್ರಶಾಂತ್, ಗೀತಾ, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಾಜೇಶ್ ಮುಂತಾದವರು ಹಾಜರಿದ್ದರು. ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಕೆಲ ಸದಸ್ಯರು ಗೈರು ಹಾಜರಾಗಿದ್ದರು. ಸಭೆಯಲ್ಲಿ ಗ್ರಾಮಸ್ಥರಿಂದ ಮನವಿ ಸ್ವೀಕರಿಸಲಾಯಿತು.
ಸಂಪಾದಕ - ರವಿ
0 Comments