ಹೆಗ್ಗಡಿಹಳ್ಳಿಯ ಕೆಂಬಾರಗೇಕಿಲ್ಲ ರಸ್ತೆ? : ಗ್ರಾಮಸ್ಥರ ಆಕ್ರೋಶ

ಅರಕಲಗೂಡು: ತಾಲೂಕಿನ ಕೆಂಬಾರೆ ಗ್ರಾಮದಲ್ಲಿ ಸಮರ್ಪಕ ರಸ್ತೆ ಇಲ್ಲದೆ ಗ್ರಾಮಸ್ಥರು ತಿರುಗಾಡಲು ಪರದಾಡುವ ಸ್ಥಿತಿ ಬಂದೊದಗಿದೆ.

ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮದಲ್ಲಿ ಓಡಾಡಲು ಸಂಪರ್ಕ ರಸ್ತೆಯೇ ಸರಿಯಾಗಿಲ್ಲ. ಉತ್ತಮ ರಸ್ತೆ ಇಲ್ಲದ ಕಾರಣ ಕಚ್ಚಾ ಓಣಿ ಮಳೆಗೆ ಕೆಸರು ಗದ್ದೆಯಾಗಿ ಹದಗೆಟ್ಟು ಹೋಗಿದೆ.

ರಸ್ತೆ ದುರಸ್ತಿ ಪಡಿಸುವಂತೆ ಶಾಸಕರು, ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತಮ್ಮೂರಿನ ಪಾಲಿಗೆ ಜನಪ್ರತಿನಿಧಿಗಳು ಇದ್ದೂ ಇಲ್ಲವಾಗಿದ್ದಾರೆ. ಚುನಾವಣೆ ಸಮಯದಲ್ಲಿ ಮತ ಕೇಳಲು ಬರುವ ರಾಜಕಾರಣಿಗಳು ಈಗ ತಿರುಗಿಯೂ ನೋಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ಅದ್ಯಾವ ಪಾಪ ಮಾಡಿದೆವೋ ಗೊತ್ತಿಲ್ಲ, ಓಡಾಡಲು ಉತ್ತಮ ರಸ್ತೆ ಇಲ್ಲ. ಕಚ್ಚಾ ರಸ್ತೆಗೆ ಮಣ್ಣು ಸುರಿದು ಕಾಲಿಡಲು ಸಾಧ್ಯವಾಗಿಲ್ಲ. ವಾಹನಗಳನ್ನು ಇಳಿಸಲು ಹೆದರಿಕೆಯಾಗುತ್ತದೆ. ದನ ಕರುಗಳನ್ನು ಜಮೀನು ಬಳಿ ಕರೆದೊಯ್ಯಲು ನರಕ ಯಾತನೆ ಅನುಭವಿಸುವಂತಾಗಿದೆ ಎಂದು ಊರಿನ ಜವರಶೆಟ್ಟಿ ನೋವು ತೋಡಿಕೊಂಡರು.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಊರಿಗೆ ಸಂಪರ್ಕ ರಸ್ತೆ ಸರಿಡಿಪಡಿಸಿ ಡಾಂಬರು ಹಾಕಿ ತಿರುಗಾಡಲು ಅನುಕೂಲ ಕಲ್ಪಿಸಿಕೊಡಬೇಕು. ಇಲ್ಲವಾದರೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
(ಹೇಳಿಕೆ)
ಕೆಂಬಾರೆ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧ ಪಡಿಸುವ ಸಂಬಂಧ ಅಂದಾಜು ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಕುರಿತು ಗೊತ್ತಿಲ್ಲ. ರಸ್ತೆ ಹದಗೆಟ್ಟಿರುವ ಕುರಿತು ಪರಿಶೀಲನೆ ನಡೆಸಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
- ರಂಗೇಗೌಡ, ಹೆಗ್ಗಡಿಹಳ್ಳಿ ಗ್ರಾಪಂ ಪಿಡಿಒ.


                  ಸಂಪಾದಕ - ರವಿ

Post a Comment

0 Comments