ಅರಕಲಗೂಡು: ಪಟ್ಠಣದಲ್ಲಿ ಶನಿವಾರ ಬಿಎಸ್ ಪಿ ಅಭ್ಯರ್ಥಿ ಅತ್ನಿ ಹರೀಶ್ ವಿಧಾನ ಸಭಾ ಚುನಾವಣೆಗೆ ಅಬ್ಬರದ ಮನೆ, ಮನೆ ಪ್ರಚಾರ ನಡೆಸಿದರು.
ನೂರಾರು ಕಾರ್ಯಕರ್ತರೊಂದಿಗೆ ಪಟ್ಟಣದ 17 ವಾರ್ಡ್ ಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮತ ಯಾಚಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲ ಮನುವಾದಿಗಳು ಇತರೆ ಪಕ್ಷಗಳ ಆಮಿಷಗಳಿಗೆ ಬಲಿಯಾಗಿ ಬಿಎಸ್ ಪಿ ವಿರುದ್ದ ಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದು ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 20 ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ತಾವು ಸಮಾಜದ ಎಲ್ಲ ವರ್ಗಗಳ ಜನರ ಹಿತಕ್ಕಾಗಿ ಶ್ರಮಿಸುತ್ತಿದ್ದೇನೆ. ಜನತೆ ವಿಶ್ವಾಸ ವ್ಯಕ್ತಪಡಿಸಿ ಚುನಾವಣೆಯಲ್ಲಿ ಬೆಂಬಲ ನೀಡುತ್ತಿದ್ದಾರೆ. ಇದನ್ನು ಸಹಿಸದೆ ಕೆಲವು ವ್ಯಕ್ತಿಗಳು ತಮ್ಮ ಸ್ವಹಿತ ಸಾಧಿಸಿಕೊಳ್ಳಲು ಇತರೆ ಪಕ್ಷಗಳ ಮರ್ಜಿಗೆ ಒಳಗಾಗಿ ಸಲ್ಲದ ಅಪ್ರಚಾರ ನಡೆಸುತ್ತಿದ್ದಾರೆ. ಇಂತಹ ವ್ಯಕ್ತಿಗಳು ನಿಮ್ಮ ಗ್ರಾಮಗಳಿಗೆ ಬಂದಾಗ ನನಗೆ ಕರೆ ಮಾಡಿದರೆ ಕೂಡಲೆ ಬಂದು ಅವರನ್ನು ಪ್ರಶ್ನೆ ಮಾಡುವುದಾಗಿ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದರು.
ಬಹುಜನ ಸಮಾಜ ಪಕ್ಷ ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳಲ್ಲಿ ನಂಬಿಕೆ ಇಟ್ಟಿದ್ದು ಸಮ, ಸಮಾಜ ನಿರ್ಮಾಣ ಹಾಗೂ ಜನಪರ ಆಡಳಿತ ನೀಡುವ ಮಹತ್ವದ ಗುರಿ ಹೊಂದಿದೆ. ಅಪಪ್ರವಾರಗಳಿಗೆ ಜನರು ಕಿವಿಗೊಡದೆ ತಮಗೆ ಮತ ನೀಡುವ ಮೂಲಕ ಬಿಎಸ್ ಪಿ ಗೆಲುವಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
0 Comments