ಹಳ್ಳಿಮೈಸೂರು ಹೋಬಳಿಯಲ್ಲಿ ಕೃಷ್ಣೇಗೌಡರ ಪರ ಮತ ಪ್ರಚಾರದ ಅಬ್ಬರ; ಪ್ರಮುಖರ ಸಾಥ್

ಅರಕಲಗೂಡು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿಮೈಸೂರು ಹೋಬಳಿ ಹಲವೆಡೆ ಪಕ್ಷೇತರ ಅಭ್ಯರ್ಥಿ ಎಂ.ಟಿ. ಕೃಷ್ಣೇಗೌಡ ಶನಿವಾರ ಬಿರುಸಿನ ಮತ ಪ್ರಚಾರ ನಡೆಸಿದರು.

ಮುಖಂಡ ಸಿ.ಡಿ. ದಿವಾಕರ್ ಗೌಡ, ನಿವೃತ್ತ ಜಿಲ್ಲಾಧಿಕಾರಿ ಎಸ್. ಪುಟ್ಟಸ್ವಾಮಿ ಅವರ ಪುತ್ರ ಪವನ್, ಜಿಪಂ ಮಾಜಿ ಸದಸ್ಯ ಎ.ಡಿ‌. ಚಂದ್ರಶೇಖರ್, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎನ್. ರವಿಕುಮಾರ್, ಕಾಮಿಡಿ ಸಂತೋಷ್ ಮುಂತಾದ ಪ್ರಮುಖರು ಕೃಷ್ಣೇಗೌಡ ಅವರಿಗೆ ಸಾಥ್ ನೀಡಿ ಮತ ಪ್ರಚಾರ ನಡೆಸಿದರು.

ಆನೆಕನ್ನಂಬಾಡಿ, ಹೊನ್ನೇನಹಳ್ಳಿ, ಹೊನ್ನೇನಹಳ್ಳಿಕೊಪ್ಪಲು, ಈರೇಗೌಡನ ಕೊಪ್ಪಲು, ದಾಸಗೌಡನಕೊಪ್ಪಲು,  ಮುಕ್ಕನಹಳ್ಳಿ, ದೇವರಗುಡ್ಡನಹಳ್ಳಿ, ಮಾಕಬಳ್ಳಿ, ನಂಜಾಪುರ, ಹಳ್ಳಿಮೈಸೂರು ಪಂಚಾಯಿತಿ ವ್ಯಾಪ್ತಿಯ ಮಂಗಳವಾಡಿ, ಮಂಗಳವಾಡಿ ಕಾಲನಿ, ಸಿಂಗನಕುಪ್ಪೆ, ಗೋಹಳ್ಳಿ, ಮೈಲಾರಿಪುರ, ಗೊಲ್ಲರಕೊಪ್ಪಲು, ಜೋಗಿಕೊಪ್ಪಲು, ಕಲ್ಲಹಳ್ಳಿ, ಮಾದೇಶಪುರ ಕಾಲನಿ, ದೇವಿಪುರ, ತೇಜೂರು, ಶೆಟ್ಟರಕೊಪ್ಪಲು, ಮಾಯಿಗೌಡನಹಳ್ಳಿ, ತಾತನಹಳ್ಳಿ, ಲಕ್ಕೂರು, ಮೆಣಗನಹಳ್ಳಿ, ಮೆಣಗನಹಳ್ಳಿ ಕೊಪ್ಪಲು, ಕ್ಯಾತನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಎಡೇಗೌಡನಕೊಪ್ಪಲು, ಮರಿಲಿಂಗೇಗೌಡನಕೊಪ್ಪಲು, ಕನಕಗಿರಿ, ಹೊಸಕೊಪ್ಪಲು, ಎಚ್. ಹಿಂದಲಹಳ್ಳಿ, ಬಡಕ್ಯಾತನಹಳ್ಳಿ, ಕುರಿಕಾವಲು, ಮಳ್ಳಿಗನಹಳ್ಳಿ, ಗುಡ್ಡೇನಹಳ್ಳಿ, ಜಾಕನಹಳ್ಳಿ, ಹಾಡ್ಯ ಗ್ರಾಮಗಳಲ್ಲಿ ಮತ ಯಾಚನೆ ಮಾಡಿದರು.

ಪತ್ನಿ ಪ್ರಚಾರ: ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಹೋಬಳಿಯ ಮದಲಾಪುರ, ಕೋಠಿ, ದಾಸನಪುರ, ಶಿರದನಹಳ್ಳಿ, ಚೌರಗಲ್, ಬಬ್ಬಗಳಲೆ ಗ್ರಾಮಗಳಲ್ಲಿ ಪಕ್ಷೇತರ ಅಭ್ಯರ್ಥಿ ಎಂ.ಟಿ. ಕೃಷ್ಣೇಗೌಡ ಅವರ ಪರ ಪತ್ನಿ ಮಮತಾ ಮತ ಯಾಚನೆ ಮಾಡಿದರು. ಮಲ್ಲಿಪಟ್ಟಣ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ಮುಖಂಡರಾದ ಗೇಟ್ ವೆಂಕಟೇಶ್, ಚಲುವೇಗೌಡ, ನಾಗಣ್ಣ, ಎಂ.ಆರ್. ಮಂಜುನಾಥ್, ಅರುಣ್, ರಾಜೇಗೌಡ, ದೇವರಾಜೇಗೌಡ ಮತ ಪ್ರಚಾರಕ್ಕೆ ಸಾಥ್ ನೀಡಿದರು.

Post a Comment

0 Comments