ಅರಕಲಗೂಡು: ಪಕ್ಷೇತರ ಅಭ್ಯರ್ಥಿ ಎಂ.ಟಿ. ಕೃಷ್ಣೇಗೌಡ ಅವರನ್ನು ಬೆಂಬಲಿಸಿ ಸ್ವಾಭಿಮಾನಿ ಪಕ್ಷ ಸೇರ್ಪಡೆ ಆಗುತ್ತಿರುವರ ಸಂಖ್ಯೆ ಏರುತ್ತಲೇ ಇದ್ದು ಮಂಗಳವಾರ ಕೂಡ ಹಲವಾರು ಮುಖಂಡರು ಸೇರ್ಪಡೆಯಾದರು.
ಪಟ್ಟಣದ ಜನಸಂಪರ್ಕ ಕಚೇರಿಯಲ್ಲಿ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಸಹೋದರ ಪುತ್ರ ಸುಬ್ರಹ್ಮಣ್ಯ, ತಾಪಂ ಮಾಜಿ ಸದಸ್ಯ ರಘು, ಚೇತನ್ ಮುಂತಾದ ಹಲವಾರು ಪ್ರಮುಖರನ್ನು ಕೃಷ್ಣೇಗೌಡ ಅವರು ಸ್ವಾಗತಿಸಿದರು.
ವಿವಿಧ ಪಕ್ಷಗಳ ಮುಖಂಡರು ತಮಗೆ ಬೆಂಬಲ ನೀಡುತ್ತಿದ್ದು ಚುನಾವಣೆಯಲ್ಲಿ ಗೆಲುವಿಗೆ ಅನುಕೂಲವಾಗಲಿದೆ. ಮತದಾರರ ವಿಶ್ವಾಸ ಉಳಿಸಿಕೊಳ್ಳುವುದಾಗಿ ಕೃಷ್ಣೇಗೌಡ ತಿಳಿಸಿದರು.
0 Comments