ಅರಕಲಗೂಡು: ಮೂರು ಪಕ್ಷಗಳು ಒಟ್ಟಾಗಿ ಕುತಂತ್ರದಿಂದ ನನ್ನನ್ನು ಸೋಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಪರಾಜಿತ ಪಕ್ಷೇತರ ಅಭ್ಯರ್ಥಿ ಎಂ.ಟಿ.ಕೃಷ್ಣೆಗೌಡ ಬೇಸರ ವ್ಯಕ್ತಪಡಿಸಿದರು.
ದೊಡ್ಡಮಗ್ಗೆಯದಲ್ಲಿ ಆಯೋಜಿಸಿದ್ದ ಚಿಂತನ ಮಂತನ ಸಭೆ ನಡೆಸಿ, ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜಕಾರಣದ ಕುತಂತ್ರದಿಂದ ಚುನಾವಣೆಯಲ್ಲಿ ಹಿನ್ನೆಡೆಯಾಗಿದೆ. ಆದರೂ ಪಕ್ಷೇತರ ಅಭ್ಯರ್ಥಿಗೆ 55 ಸಾವಿರ ಮತ ನೀಡಿರುವುದು ಸಂತೋಷ ತಂದಿದೆ. ಮುಂದಿನ ದಿನದಲ್ಲಿ ಕಾರ್ಯಕರ್ತರು ಸೂಚಿಸಿದ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷವನ್ನು ಬಳಪಡಿಸಲಾಗುವುದು ಎಂದರು.
ತಾಲೂಕಲ್ಲಿ ಸಾಕಷ್ಟು ಸೌಲತ್ತು ಇದ್ದು,ಅದನ್ನು ಉಪಯೋಗಿಸಿಕೊಂಡು ಜನರಿಗೆ ತಲುಪಿಸಬೇಕು, ಅಭಿವೃದ್ಧಿ ಮಾಡಬೇಕೆಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ ಹೊರತು ಬೇರೆ ಉದ್ದೇಶದಿಂದ ಅಲ್ಲ. ಆದರೆ, ಪಕ್ಷ ಟಿಕೆಟ್ ನೀಡುತ್ತೇನೆಂದು ಕೊನೆ ಗಳಿಗೆಯಲ್ಲಿ ಮೋಸ ಮಾಡಿದರು. ಅಗಲಾದರೂ ಇಬ್ಬರನ್ನು ಕರೆದು ಈ ಬಾರಿ ಶ್ರೀಧರ್ ಗೌಡರಿಗೆ ಟಿಕೆಟ್ ನೀಡುತ್ತೇನೆ. ಗೆಲ್ಲಿಸುವಂತೆ ಹೇಳದೆ ರಾತ್ರಿಯಲ್ಲಿ ವಾಪಾಸ್ ಕಳುಹಿಸಿದರು. ಕಾಂಗ್ರೆಸ್ ಅವರ ಮನೆ ಆಸ್ತಿನಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆಯಲ್ಲಿ 5 ಸಿಟ್ಗಳನ್ನು ಕಳೆದಿದ್ದಾರೆ. ಮುಂದಿನ ದಿನಗಳಲ್ಲಿ ಎಚ್ಛೆತ್ತುಕೊಳ್ಳದಿದ್ದರೆ ಹಾಸನದಲ್ಲಿ ಕಾಂಗ್ರೆಸ್ ಇಲ್ಲದಂತಾಗುತ್ತದೆ. ಎಲ್ಲಿಂದಲೋ ಬಂದವರಿಗೆ ಜಿಲ್ಲೆ ಉಸ್ತುವಾರಿ ನೀಡುವುದಲ್ಲ. ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದ ಅವರು, 2 ಲಕ್ಷ ಠೇವಣಿ ಕಟ್ಟಿದ್ದೀವಿ ಕಾಂಗ್ರೆಸ್ ಸದಸ್ಯತ್ವಕ್ಕೆ. ಹೇಗೆ ಉಚ್ಛಟಿಸುತ್ತಾರೆ ಎಂದು ಹೇಳಿದರು.
ಹಳ್ಳಿಮೈಸೂರು ಹೋಬಳಿಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಆತ್ಮಲೋಕನ ಸಭೆಯನ್ನು ಕಾಂಗ್ರೆಸ್ ಮಾಡಬೇಕು. ನಾವ್ಯಾಕೆ ಮಾಡಬೇಕು. ಅರಕಲಗೂಡಿನಲ್ಲಿ ಕಾಂಗ್ರೆಸ್ ಸೋಲಿಗೆ ನಾಯಕರೇ ನೇರ ಹೊಣೆ. ಟಿಕೆಟ್ ವಂಚಿಸಿದ ನಾಯಕರೇ ಆತ್ಮವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮುಖಂಡ ಶಂಕರ್ ಮಾತನಾಡಿ, ರಾಮನಾಥಪುರದಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳಲು ದವಡೆಹಲ್ಲು ಊದಿರಿಸುತ್ತೇನೆಂದು ಹೇಳಿದ್ದಾರೆ. ಜತೆಗೆ ಹಣಪಡೆದು ಪಕ್ಷೇತರ ಅಭ್ಯರ್ಥಿ ಬಳಿಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತು ಅವರು ಪ್ರಮಾಣ ಮಾಡಲಿ. ನಾನು ಮಾಡುತ್ತೇನೆ. ನಾನು ಬಾರ್ ನಲ್ಲಿ ಲೋಟ ತೊಳೆದು ಜನರ ಕಷ್ಟಕ್ಕೆ ಸ್ಪಂಧಿಸುತ್ತಿದ್ದೇನೆ. ಯಾವ ರಾಜಕಾರಣಿಯಿಂದಲೂ 1 ಪೈಸೆಯನ್ನು ಪಡೆದಿಲ್ಲ. ಅವರ ಬೆದರಿಕೆಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಎ. ಮಂಜು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರ ದಿನೇಶ್ ಬೈರೇಗೌಡ ಮತ್ತಿತ
ಜಿಪಂ ಮಾಜಿ ಸದಸ್ಯರಾದ ಎಚ್.ಎಸ್. ಶಂಕರ್, ಎ.ಡಿ. ಚಂದ್ರಶೇಖರ್, ಮುಖಂಡರಾದ ಡಾ. ದಿನೇಶ್ ಭೈರೇಗೌಡ, ಎನ್. ರವಿಕುಮಾರ್, ಬಿ.ಜೆ. ರಾಮೇಗೌಡ, ಗಣೇಶ್ ವೇಲಾಪುರಿ ಮತ್ತಿತರಿದ್ದರು.
0 Comments