ಎ. ಮಂಜುಗೆ ಜೆಡಿಎಸ್ ಟಿಕೆಟ್ ಕೊಡಬೇಡಿ, ಜೈಲಲ್ಲಿದ್ದು ಬಂದಿದ್ದೇವೆ ಎಂದು ಗೋಗರೆದ ಕಾರ್ಯಕರ್ತ

ಅರಕಲಗೂಡು : ಎ. ಮಂಜುಗೆ ಟಿಕೆಟ್ ಕೋಡು ಬೇಡ, ನಾವೆಲ್ಲ ಜೈಲಲ್ಲಿದ್ದು ಬಂದಿದ್ದೆವೆ,  ಪಟ್ಟಣದಲ್ಲಿ ಇಂದು ಏರ್ಪಡಿಸಿದ್ದ ಜೆಡಿಎಸ್ ಮುಖಂಡರ ಸಭೆಯಲ್ಲಿ ಕಾರ್ಯಕರ್ತನೊಬ್ಬ ವೇದಿಕೆ ಮುಂಭಾಗ ಬಂದು ಏರುಧ್ವನಿಯಲ್ಲಿ ಎ. ಮಂಜುಗೆ ಜೆಡಿಎಸ್ ಟಿಕೆಟ್ ಕೊಡೊದು ಬೇಡ, ಎಚ್.ಎಸ್. ಶಂಕರ್ ಅವರಿಗೆ ಕೊಡಿ ಎಂದು ಒತ್ತಾಯಿಸತೊಡಗಿದ ಪ್ರಸಂಗ ಜರುಗಿತು.

ಕಾಂಗ್ರೆಸ್ ನಲ್ಲಿದ್ದ ಎ.ಟಿ. ರಾಮಸ್ವಾಮಿ ಅವರನ್ನು ಕರತಂದು ಜೆಡಿಎಸ್ ಟಿಕೆಟ್ ಕೊಟ್ಟು ಬೆಳೆಸಿದ್ರಿ ಅವರು ಜೆಡಿಎಸ್ ಕಾರ್ಯಕರ್ತರನ್ನೆಲ್ಲ ಕರೆದುಕೊಂಡು ಹೋದರು, ಈಗ ಎ. ಮಂಜುಗೆ ಟಿಕೆಟ್ ಕೊಡಿ ಅವರೂ ಪಕ್ಷದ ಕಾರ್ಯಕರ್ತರನ್ನೆಲ್ಲ ಕರೆಸೊಯ್ಯುತ್ತಾರೆ ಎಂದು ಏರುಧ್ವನಿಯಲ್ಲಿ ಮಾತನಾಡಿದರು.

ಇದರಿಂದ ವಿಚಲಿತರಾದ ರೇವಣ್ಣ ಅವರು ಮಂಜಣ್ಣ ಅವರಿಗೆ ಟಿಕೆಟ್ ಖಾತ್ರಿಯಾಗಿದೆ  ಎಲ್ಲರೂ ಮಂಜು ಪರ ಕೈಎತ್ತಿ ಎಂದರು. ಆಗವ ಬಹುತೇಕ ಕಾರ್ಯಕರ್ತರು ಎ.ಟಿ. ರಾಮಸ್ವಾಮಿ ಅವರಿಗಿಂತ ಮಂಜಣ್ಣ ಅವರಿಗೆ ಟಿಕೆಟ್ ಕೊಡುವುದು ಒಳ್ಳೆಯದು ಎಂದು ಘೋಷಣೆ ಕೂಗಿ ಬೆಂಬಲ‌ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ‌ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದ ಎ.ಟಿ. ರಾಮಸ್ವಾಮಿ ಅವರ ಅಪಾರ ಬೆಂಬಲಿಗರು ಗೈರಾಗಿದ್ದರು.  ಹೀಗಾಗಿ ಕಾರ್ಯಕ್ರಮದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜ‌ನರು ಸೇರದೆ ಕುರ್ಚಿಗಳು ಖಾಲಿ ಹೊಡೆಯುತ್ತಿದ್ದವು. ಇದರಿಂದಾಗಿ ರೇವಣ್ಣ ಅವರು ಇದು ಕಾರ್ಯಕರ್ತರ ಸಭೆಯಲ್ಲ, ಮುಖಂಡರನ್ನು ಮಾತ್ರ ಕರೆಸಿದ್ದೇವೆ ಎಂದು ವೇದಿಕೆಯಲ್ಲಿ ಸಮರ್ಥಿಸಿಕೊಂಡರು.

Post a Comment

0 Comments