ವಿದೇಶದಿಂದ ಬರುವ ಡಾ. ಕೋಮಲ್ ಕುಮಾರ್ ಅದ್ದೂರಿ ಸ್ವಾಗತಿಸುತ್ತಿದ್ದೇವೆ ಎಂದ ಅಭಿಮಾನಿಗಳು

ಅರಕಲಗೂಡು: ವಿದೇಶದಲ್ಲಿ ಕ್ಯಾನ್ಸರ್ ಗುಣಪಡಿಸಲು ಶಾಶ್ವತ ಲಸಿಕೆ ಸಂಶೋಧನೆ ನಡೆಸುತ್ತಿರುವ ಸ್ಥಳೀಯರಾದ ವಿಜ್ಞಾನಿ ಡಾ. ಕೋಮಲ್ ಕುಮಾರ್ ಅವರು ಜ. 20ರಂದು ಅರಕಲಗೂಡಿಗೆ ಆಗಮಿಸುತ್ತಿದ್ದು ಅದ್ದೂರಿಯಾಗಿ ಸ್ವಾಗತಿಸಲು ಸಿದ್ದತೆ ಕೈಗೊಳ್ಳಲಾಗಿದೆ ಎಂದು ಅಭಿಮಾನಿ ಬಳದ ಮುಖಂಡ ಅವಿನಾಶ್ ತಿಳಿಸಿದರು.

ಡಾ ಕೋಮಲ್ ಕುಮಾರ್ ಅವರು ವಿಜ್ಞಾನಿಯಾಗಿ ಹಲವು ದೇಶಗಳಲ್ಲಿ ಸೇವೆ ಸಲ್ಲಿಸಿದ್ದು, ಫಿನ್ ಲ್ಯಾಂಡ್ ನಲ್ಲಿ ರಕ್ತ ಕ್ಯಾನ್ಸರ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಇವರನ್ನು ಅರಕಲಗೂಡು ಅನಕೃ ವೃತ್ತದಲ್ಲಿ ಸ್ವಾಗತಿಸಲಾಗುವುದು, ಅಂದು ಕೋಮಲ್ ಕುಮಾರ್ ಅವರೊಂದಿಗೆ ಶಿಕ್ಷಣ, ಅರೋಗ್ಯ ವ್ಯವಸ್ಥೆ ಕುರಿತು ಹಾಗೂ ತಾಲೂಕಿನ ಅಭಿವೃದ್ಧಿ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೋಮಲ್ ಕುಮಾರ್ ಅಭಿಮಾನಿ ಬಳಗದ ಚರಣ್, ಮಂಜು ಗೋಷ್ಠಿಯಲ್ಲಿದ್ದರು.

Post a Comment

0 Comments