ಕೇರಳಾಪುರದಲ್ಲಿ ಕೋವಿಡ್ ಜಾಗೃತಿ ಅಭಿಯಾನ, ಸುರಕ್ಷತೆ ಪಾಲಿಸಿ ಡಾ. ಪ್ರಪುಲ್ಲಾ

ಅರಕಲಗೂಡು: ತಾಲೂಕಿನ ಕೇರಳಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಸಹಯೋಗದಲ್ಲಿ ಶುಕ್ರವಾರ ಕೋವಿಡ್ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರಫುಲ್ಲ ಚಾಲನೆ ನೀಡಿ ಮಾತನಾಡಿ, ಕರೊನಾ ಸೋಂಕಿನ ಎರಡನೆ ಅಲೆ ತಗ್ಗುತ್ತಿದೆ ಎಂದು ಸಾರ್ವಜನಿಕರು ಮೈಮರೆಯದೆ ಮುಂಜಾಗ್ರತೆ ವಹಿಸಬೇಕು. ಗುಂಪುಗೂಡದೆ ಪರಸ್ಪರ ಅಂತರ ಕಾಪಾಡುವ ಮೂಲಕ ಎಲ್ಲರೂ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಮಹಾಮಾರಿ ಸೋಂಕು ತಡೆಗೆ ಜಾಗೃತಿ ವಹಿಸಬೇಕು ಎಂದರು.

ನೋಡಲ್ ಅಧಿಕಾರಿ ಅರುಣ್ ಕುಮಾರ್, ಗ್ರಾಮ ಪಂಚಾಯತಿ ಅಧ್ಯಕ್ಷೆ ರತ್ನಾ, ಉಪಾಧ್ಯಕ್ಷೆ ಗಂಗಮಾಣಿ, ಕಾರ್ಯದರ್ಶಿ ರವಿ, ಪಂಚಾಯಿತಿ ಸದಸ್ಯರು ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಆಸ್ಪತ್ರೆ ಸಿಬ್ಬಂದಿ ಪಾಲ್ಗೊಂಡಿದ್ದರು.

                  ಸಂಪಾದಕ- ರವಿ                     

Post a Comment

0 Comments