ಬೀದಿಗೆ ಬಿದ್ದ ಎಟಿಆರ್ ಮತ್ತವರ ಮಕ್ಕಳ ಕರಾಳ ಮುಖ; ಯೋಗಾರಮೇಶ್ ಆಕ್ರೋಶ

ಅರಕಲಗೂಡು: ಒಂದಲ್ಲ ನಾಲ್ಕು ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ ಹಾಳುಗೆಡವಿದ ಎಟಿಆರ್, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಣದ ಹೊಳೆ ಹರಿಸುವ ಕುರಿತು ಹೇಳಿಕೆ ನೀಡುವ ಮೂಲಕ ಶಾಸಕ ಎ.ಟಿ. ರಾಮಸ್ವಾಮಿ ಮತ್ತವರ ಮಕ್ಕಳು ಹಣ ವಸೂಲಿ ದಂದೆಯಲ್ಲಿ ತೊಡಗಿರುವ ಅನುಮಾನ ಮೂಡಿದ್ದು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಎಚ್. ಯೋಗಾರಮೇಶ್ ಆರೋಪಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಾಗಿ ಭರಪೂರ ಅನುದಾನ ಹರಿದು ಬಂದಿದೆ. ಅಭಿವೃದ್ಧಿ ಕಾಮಗಾರಿಗಳ ನೆಪದಲ್ಲಿ ಶಾಸಕರು ಮತ್ತು ಅವರ ಮಕ್ಕಳು ಹಣ ವಸೂಲಿ ದಂದೆಗೆ ಇಳಿದಿರುವ ಶಂಕೆ ವ್ಯಕ್ತವಾಗಿದೆ. 

ಗುತ್ತಿಗೆದಾರರಿಂದ ಹಣ ಪೀಕುತ್ತಿದ್ದು ಸರ್ಕಾರದ ಅನುದಾನದ ಲೂಟಿಯಲ್ಲಿ ತೊಡಗಿದ್ದು ಚುನಾವಣೆಯಲ್ಲಿ ಮತದಾರರಿಗೆ ಹಣ ನೀಡಲು ತಯಾರಿ ನಡೆಸಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಇತ್ತೀಚೆಗೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಶಾಸಕರು ಮಾತನಾಡುತ್ತಾ, ಚುನಾವಣೆಯಲ್ಲಿ ಬೇರೆ ಪಕ್ಷದವರು ಯಾರು ಏನು ನೀಡುತ್ತಾರೋ ಅದರ ಎರಡು ಮೂರು ಪಟ್ಟು ನೀಡಲು ಈ ಭಾರಿ ತೀರ್ಮಾನಿಸಿದ್ದೇನೆ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಇದು ಶಾಸಕರಿಗೆ ಶೋಭೆ ತರುವುದಿಲ್ಲ. ಸಜ್ಜನ, ಪ್ರಾಮಾಣಿಕ ರಾಜಕಾರಣಿ ಎಂಬ ಅಭಿಪ್ರಾಯವನ್ನು ಶಾಸನ ಸಭೆಯಲ್ಲಿ ಮೂಡಿಸುವ ನಾಟಕವಾಡುವ ಶಾಸಕರು ಇತ್ತೀಚಿನ ದಿನಗಳಲ್ಲಿ ಅವರಲ್ಲಿ ಹತಾಶೆ ಭಾವನೆ ವ್ಯಕ್ತವಾಗುತ್ತಿದೆ.

ನನಗೆ ಹಣ ನೀಡುವವರಿದ್ದಾರೆ ಎಂದು ಶಾಸಕರು ಹೇಳಿದ್ದು, ಕಾನೂನು ವ್ಯಾಪ್ತಿ ಮೀರಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಿದರೆ ಮಾತ್ರ ಸಹಾಯ ಮಾಡುತ್ತಾರೆ ಹೊರತು ಸಜ್ಜನ, ಪ್ರಾಮಾಣಿಕವಾಗಿರುವವರಿಗೆ ಯಾರು ಸಹಾಯ ಮಾಡುವುದಿಲ್ಲ. ನಾವು ನಿಮ್ಮಿಂದ ಈ ಮಾತನ್ನು ನಿರೀಕ್ಷಿಸಿರಲಿಲ್ಲ. ನಿಮ್ಮ ಮೇಲೆ ನಮಗೂ ಗೌರವವಿತ್ತು. ಅದನ್ನು ಕಳೆದುಕೊಳ್ಳುವ ಕೆಲಸ ಮಾಡಿರುವುದು ಖಂಡನೀಯ ಎಂದು ಬುಧವಾವರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ದಾಖಲೆ ಇದ್ದಾರೆ ಬಿಡುಗಡೆ ಮಾಡಲಿ: ಕಾಂಗ್ರೆಸ್ ಮುಖಂಡ ಕೃಷ್ಣೆಗೌಡರಿಗೆ ನಾನು ಉಸಿರು ಬಿಟ್ಟರೆ ಕ್ರಷರ್ ನಿಲ್ಲಿಸುವ ಶಕ್ತಿ ನನಗಿದೆ ಎಂಬ ಹೇಳಿಕೆಯನ್ನು ಶಾಸಕರು ನೀಡಿದ್ದಾರೆ. ಶಾಸಕರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಅದು ಬಿಟ್ಟು ಈ ರೀತಿ ಕ್ಷÄಲ್ಲಕ ಹೇಳಿಕೆ ನೀಡುವುದು ತರವಲ್ಲ. ಚುನಾವಣೆ ಸಂದರ್ಭದಲ್ಲಿ ನಿಮ್ಮೊಂದಿಗಿದ್ದರೆ ಮಾತ್ರ ಅವರು ಒಳ್ಳೆಯವರು. ಬೇರೆ ಪಕ್ಷಕ್ಕೆ ಹೋದರೆ ಅವರು ಕೆಟ್ಟವರಾಗಾಗಿ ಕಾಣುತ್ತಾರೆ. ರಿಯಲ್ ಎಸ್ಟೇಟ್, ಗಣಿಗಾರಿಕೆ ಮಾಡಿದವರೆಲ್ಲ ಬಂದ ಬಳಿಕ ರಾಜಕೀಯ ಕಲುಷಿತವಾಗಿದೆ ಎಂದು ಹೇಳುತ್ತೀರಾ?. ಕುಟುಂಬ ರಾಜಕಾರಣ ವಿರೋಧಿಸುತ್ತಿದ್ದವರು ಇಂದು ಮಕ್ಕಳನ್ನು ಬಿಟ್ಟು ಹಣ ವಸೂಲಿ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು. 

ಇದುವರೆಗೆ ವಿವಿಧ ಪಕ್ಷಗಳಿಂದ ಹಲವು ಮಂದಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಯಾರೊಬ್ಬರೂ ಮತದಾರರು ಗೌರವವನ್ನು ಕಳೆದಿರಲಿಲ್ಲ. ಇಂದು ಮತದಾರರ ಗೌರವ ಹಾಳಾಗುತ್ತಿದೆ. ಈ ಬಾರಿ ಶಾಸಕರು 100 ಕೋಟಿ ರೂ ಹಣ ಖರ್ಚು ಮಾಡಿದರೂ ಸೋಲು ಶತಸಿದ್ಧ. ಸೋಲಿನ ಭೀತಿಯಿಂದ ಹಣದ ಮೂಲಕ ಚುನಾವಣೆ ಗೆಲ್ಲಲು ಹೊರಟಿದ್ದೀರಾ?. ಪ್ರಾಮಾಣಿಕ, ಸಜ್ಜನ ಎಂಬ ಮುಖವಾಡ ಬಯಲಾಗಿದ್ದು, ಜನತೆ ತಕ್ಕ ಪಾಠ ಕಳಿಸುತ್ತಾರೆ ಎಂದರು.

ಬಿಜೆಪಿ ತಾಲೂಕು ಘಟಲಕದ ಅಧ್ಯಕ್ಷ ಎಂ.ಟಿ. ಸತ್ಯನಾರಾಯಣ, ಮುಖಂಡರಾದ ಶಿವಲಿಂಗ ಶಾಸ್ತ್ರಿ, ರಾಮಣ್ಣ ಗೋಷ್ಠಿಯಲ್ಲಿದ್ದರು.

Post a Comment

0 Comments