ಅರಕಲಗೂಡು: ಪಟ್ಟಣದ ಸಾಲಗೇರಿ ರಸ್ತೆಯಲ್ಲಿ ಗುಂಡಿಗಳ ಕೇಕೆ ಹೇಳತೀರದು, ಪ್ರಯಾಣಿಕರ ಪಡುತ್ತಿರುವ ಗೋಳು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಿಡಿ ಹಿಡಿ ಶಾಪ ಹಾಕುತ್ತಾ ಕುಲುಕುತ್ತಾ ಸಂಚರಿಸುವಂತಾಗಿದೆ.
ಸತತ ಮಳೆಗೆ ಹದಗೆಟ್ಟ ಗುಂಡಿ ರಸ್ತೆಗಳು ಕೆಸರುಮಯವಾಗಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿ ಪ್ರಯಾಣಿಕರು ಪರದಾಡುತಾಗಿತ್ತು.
ಕಳೆದ ಹಲವಾರು ವರ್ಷಗಳು ಅಭಿವೃದ್ಧಿ ಕಾಣದೆ ಹದಗೆಟ್ಟಿರುವ ಪಟ್ಟಣದ ಸಾಲಗೇರಿ ರಸ್ತೆಯಲ್ಲಿ ಹೆಜ್ಜೆಗೊಂದು ಗುಂಡಿಗಳು ಬಾಯ್ತೆರೆದುಕೊಂಡಿವೆ.
ಕೆಸರು ಗುಂಡಿಗಳು ಹೊಂಡಗಳಾಗಿ ವಾಹನ ಸವರಾರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಮಳೆಯಿಂದಾಗಿ ಹಾಳಾದ ರಸ್ತೆಗಳ ಗುಂಡಿಗಳು ಮತ್ತಷ್ಟು ಅದ್ವಾನವಾಗಿ ಪ್ರಯಾಣಿಕರ ಪಾಲಿಗೆ ತಲೆನೋವಾಗಿದ್ದು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕಿ ಸಂಚರಿಸುತ್ತಿದ್ದಾರೆ.
0 Comments