ಅರಕಲಗೂಡು: ಮಾಜಿ ಸಚಿವ ಎ. ಮಂಜು ನಡೆಸಿದ ದಲಿತರ ಮನೆ ಗ್ರಾಮ ವಾಸ್ತವ್ಯ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಿದೆ. ಹೌದು, ಅಂಬೇಡ್ಕರ್ ಜಯಂತಿ ಹಿನ್ನಲೆಯಲ್ಲಿ ಮಾಜಿ ಸಚಿವ ಎ. ಮಂಜು ಬುಧವಾರ ರಾತ್ರಿ ತಾಲೂಕಿನ ಅಜ್ಜೂರು ಕಾಲನಿಯ ದಲಿತರ ಮನೆಯಲ್ಲಿ ವಾಸ್ತವ್ಯ ನಡೆಸಿದರು.
ರಾತ್ರಿ ಏಳು ಗಂಟೆ ಸುಮಾರಿಗೆ ಜಿಟಿ ಜಿಟಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಅಜ್ಜೂರು ಗ್ರಾಮದ ದಲಿತರ ಕಾಲನಿಗೆ ಆಗಮಿಸಿದ ಎ. ಮಂಜು ಅವರನ್ನು ಗ್ರಾಮಸ್ಥರು ಹೂ ಮಾಲೆ ಹಾಕಿ ಸಂಭ್ರಮದ ಸ್ವಾಗತ ಕೋರಿದರು.
ಗ್ರಾಮದ ದಲಿತರ ಕಾಲನಿಯ ದೇವರಾಜು ಅವರ ಮನೆಯಲ್ಲಿ ರಾತ್ರಿ ಕೆಲ ಕಾಲ ಜನರೊಂದಿಗೆ ಬೆರೆತು ಸಮಾನತೆಯ ಹರಿಕಾರ ಡಾ. ಅಂಬೇಡ್ಕರ್ ಅವರ ಬದುಕಿನ ತತ್ವ ಸಿದ್ದಾಂತಗಳು ಹಾಗೂ ಮಾನವೀಯ ಮೌಲ್ಯಗಳ ಕುರಿತು ವಿಚಾರ ವಿನಿಮಯ ನಡೆಸಿದರು. ನಂತರ ದೇವರಾಜು ಅವರ ಮನೆಯಲ್ಲಿ ಸಿದ್ದಪಡಿಸಿದ್ದ ಊಟ ಸವಿದರು. ಅಲ್ಲಿಯೇ ಮಲಗಿ ರಾತ್ರಿ ವಾಸ್ತವ್ಯ ಹೂಡಿದರು.
ಬುಧವಾರ ಬೆಳಗ್ಗೆ ಎ. ಮಂಜು ಅವರು ಗ್ರಾಮಸ್ಥರು ಹಾಗೂ ಅಪಾರ ಬೆಂಬಲಿಗರೊಂದಿಗೆ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ 131ನೇ ಜಯಂತಿ ಆಚರಿಸಿದರು.
.
0 Comments