ಪುನೀತ ನಮನಕ್ಕೆ ಸಾಕ್ಷಿಯಾದ ಜನಸೇವಾ ಕಾರ್ಯಗಳು; ರಕ್ತದಾನ, ಆರೋಗ್ಯ ತಪಾಸಣೆ

ಅರಕಲಗೂಡು: ಚಿತ್ರನಟ ಪುನೀತ್ ರಾಜಕುಮಾರ್ ಜನ್ಮ ದಿನದ ಪ್ರಯುಕ್ತ ಪಟ್ಟಣದಲ್ಲಿ ಡಾ. ರಾಜರತ್ನ ಬಳಗ ಹಾಗೂ ಎಸ್.ಜಿ. ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಜನಜಾತ್ರೆ ನೆರೆದಿತ್ತು.

ರಕ್ತದಾನ ಶಿಬಿರ, ಬಿಪಿ ಮತ್ತು ಸಕ್ಕರೆ ಕಾಯಿಲೆ ಪರೀಕ್ಷೆ, ಕೋವಿಡ್ ಲಸಿಕಾ ಅಭಿಯಾನ, ಕಣ್ಣು ತಪಾಸಣೆ ನಡೆಸಲಾಯಿತು. ಎಸ್.ಟಿ. ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಚ್.ಪಿ. ಶ್ರೀಧರ್ ಗೌಡ ಸ್ವಯಂ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. 

ಹಾಸನ ರಕ್ತ ನಿಧಿ, ಅಮ್ಮ ಆಸ್ಪತ್ರೆ ಸೇರಿದಂತೆ ವಿವಿದ ನುರಿತ ತಜ್ಞರು ಶಿಬಿರದಲ್ಲಿ ಜನರಿಗೆ ಆರೋಗ್ಯ ತಪಾಸಣೆ ನಡೆಸಿ ಔಷಧಿ ಮಾತ್ರೆಗಳನ್ನು ಉಚಿತವಾಗಿ ನೀಡಿದರು. 
ಶಿಬಿರದಲ್ಲಿ ಕಿಕ್ಕಿರಿದು ಸೇರಿದ್ದ ಜನರು ಸರದಿ ಸಾಲಿನಲ್ಲಿ ಆಗಮಿಸಿದರು. 200 ಮಂದಿ ರಕ್ತದಾನ ಮಾಡಿದರು. ಒಚಿದು ಸಾವಿರಕ್ಕೂ ಹೆಚ್ಚು ಜನ ಆರೋಗ್ಯ ತಪಾಸಣೆಗೆ ಒಳಗಾದರು. ಇದಕ್ಕೂ ಮುನ್ನ ಪಟ್ಟಣದ ವೃದ್ಧಾಶ್ರಮಕ್ಕೆ ತೆರಳಿ ವೃದ್ಧರಿಗೆ ಹೊದಿಕೆಗಳನ್ನು ವಿತರಿಸಲಾಯಿತು.

ಪುನೀತ್ ಜನ್ಮ ದಿನದ ಪ್ರಯುಕ್ತ ಸಾರ್ವಜನಿಕರಿಗೆ ಬಿರಿಯಾನಿ ಊಟ ನೀಡಲಾಯಿತು.

Post a Comment

0 Comments