ಅರಕಲಗೂಡು: ಅಪರೂಪರದ ರಾಜಕಾರಣಿ ಎ.ಟಿ. ರಾಮಸ್ವಾಮಿ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಶ್ರಮ ವಹಿಸುತ್ತಿದ್ದು ಇಂಥವರು ರಾಜಕಾರಣದಲ್ಲಿ ಉಳಿಯಬೇಕು. ಮತದಾರರು ಮುಂದಿನ ಚುನಾವಣೆಯಲ್ಲೂ ರಾಮಸ್ವಾಮಿ ಅವರನ್ನು ಗೆಲ್ಲಿಸಲೇ ಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
ಹಳ್ಳಿಮೈಸೂರು ಹೋಬಳಿ ಟಿ. ಮಾಯಿಗೌಡನಹಳ್ಳಿ ಗ್ರಾಮದಲ್ಲಿ ಶ್ರೀ ನಂಜುಂಡೇಶ್ವರ ದೇವಾಲಯ ಉದ್ಘಾಟನಾ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿ, ಇಂದಿನ ಕಾಲದ ಕೆಲವರು ಶಾಸಕರಾದವರಿಗೆ ದುರಾಸೆ ಇರುತ್ತದೆ. ಆದರೆ ರಾಮಸ್ವಾಮಿ ಅವರು ಅಂತವರಲ್ಲ. ಅವರು ಅಭಿವೃದ್ಧಿ ಕೆಲಸಗಳತ್ತ ಒತ್ತು ನೀಡುತ್ತಿದ್ದಾರೆ. ದನೀರಾವರಿ ಯೋಜನೆಗಳಿಗೆ ಒತ್ತು ನೀಡಿ ಕೆರೆ ಕಟ್ಟೆಗಳನ್ನು ತುಂಬಿಸಿ ಅಭಿವೃದ್ಧಿ ಕಾರ್ಯಗಳಲ್ಲಿ ಮಗ್ನರಾಗಿರುವ ಶಾಸಕ ಎ.ಟಿ. ರಾಮಸ್ವಾಮಿ ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಬೆಂಗಳೂರು ಭೂ ಕಬಳಿಕೆ ಹೋರಾಟದಲ್ಲೂ ಐತಿಹಾಸಿಕ ಹೋರಾಟ ಕೈಗೊಂಡು ಹೆಗ್ಗುರುತು ಮೂಡಿಸಿದ್ದಾರೆ. ಅಪರೂಪದ ರಾಜಕಾರಣಿ ರಾಮಸ್ವಾಮಿ ಅವರನ್ನು ಕ್ಷೇತ್ರದ ಮತದಾರರು ಮುಂದಿನ ಚುನಾವಣೆಯಲ್ಲೂ ಗೆಲ್ಲಿಸಿ ಅಭಿವೃದ್ಧಿ ಪರ ರಾಜಕಾರಣಿಗೆ ಮನ್ನಣೆ ನೀಡಬೇಕು ಎಂದು ಮನವಿ ಮಾಡಿದರು.
ಗ್ರಾಮೀಣ ಪ್ರದೇಶದಲ್ಲಿಯೂ ಹಿಂದಿನ ಕಾಲದಲ್ಲಿ ಉಳಿದುಕೊಂಡಿದ್ದ ಸಾಮರಸ್ಯ ಕಾಣೆಯಾಗಿ ಕುಟುಂಬದಲ್ಲಿನ ಬಾಂಧವ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಗುರು ಹಿರಿಯರ ಮಾರ್ಗದರ್ಶನ ಪಡೆದು ಪರಸ್ಪರ ಸೌಹಾರ್ದ ಮನೋಭಾವನೆ ಬೆಳೆಸಿಕೊಂಡು ಬದುಕಿನಲ್ಲಿ ಮುನ್ನಡೆಯಬೇಕಿದೆ ಎಂದು ಕಿವಿಮಾತು ಹೇಳಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತೀಯರ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಮಹತ್ತರವಾದ ಸ್ಥಾನವಿದೆ. ಯಾರೊಂದಿಗೂ ಹಂಚಿಕೊಳ್ಳದ ದುಖಃ, ದುಮ್ಮಾನಗಳನ್ನು ಮನುಷ್ಯ ದೇವಸ್ಥಾನಕ್ಕೆ ಬಂದು ನಿವೇದಿಸಿಕೊಳ್ಳುತ್ತಾನೆ. ಜಗತ್ತನ್ನು ಆವರಿಸಿರುವ ಭಗವಂತ ಮನುಷ್ಯನ ಅಂತರAಗದ ಪ್ರಾರ್ಥನೆಗಳಿಗೆ ದೇವಸ್ಥಾನದಲ್ಲಿ ಸದ್ಭಾವನಾತ್ಮಕ ಸಂಬAಧ ಕಲ್ಪಿಸಿ ಒಳಿತು ಹರಸುತ್ತಾನೆ. ನಂಜುAಡೇಶ್ವರಸ್ವಾಮಿ ಅಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಹರಸಿದರು.
ದೇವೇಗೌಡರು ರೈತರ ಮೇಲೆ ಅತೀವ ಕಾಳಜಿ ವಹಿಸಿ ದೇಶದ ಘನತೆ ಹೆಚ್ಚಿಸಿದ್ದಾರೆ. ಕುಮಾರಸ್ವಾಮಿ ಅವರು ಸಹ ಎರಡು ಬಾರಿ ಮುಖ್ಯಮಂತ್ರಿ ಆಗಿರುವುದು ಹೊಳೆನರಸೀಪುರ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎ.ಟಿ. ರಾಮಸ್ವಾಮಿ, ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಐದು ಕೋಟಿ ಮಂಜೂರು ಮಾಡಲಾಗಿದೆ ಎಂದರು.
ಸಂಸದ ಪ್ರಜ್ವಲ್ ರೇವಣ್ಣ, ಬಿಬಿಎಂಪಿ ಮಾಜಿ ಸದಸ್ಯೆ ಗಂಗಾಭಿಕೆ ಮಲ್ಲಿಕಾರ್ಜುನ, ಶಿಕ್ಷಕಿ ಮಂಜುಳ, ಚಟ್ನಹಳ್ಳಿ ಮಹೇಶ್ ಮಾತನಾಡಿದರು. ಶ್ರೀ ಸೋಮಶೇಖರ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ, ಶ್ರೀ ವಿಜಯಕುಮಾರ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಸವರಾಜೇಂದ್ರ ಸ್ವಾಮೀಜಿ, ಚನ್ನಬಸವದೇಶಿ ಕೇಂದ್ರ ಸ್ವಾಮೀಜಿ, ವೀರಶೈವ ಮಹಾಸಭಾ ಅಧ್ಯಕ್ಷರಾದ ಎಸ್.ಎನ್. ನಂಜಪ್ಪ, ಎನ್. ರವಿಕುಮಾರ್, ಬೆಂಗಳೂರು ಕೆಎಸ್ ಆರ್ ಟಿಸಿ ಉಪಾಧ್ಯಕ್ಷ ಈಶ್ವರಪ್ಪ, ಉದೇಶ್, ಹೇಮಂತಕುಮಾರ್, ಗುರುಮೂರ್ತಿ, ಎಚ್.ಎನ್. ದೇವೇಗೌಡ ಇತರರಿದ್ದರು.
ಧಾರ್ಮಿಕ ವಿಧಾನಗಳನ್ವಯ ದೇವಸ್ಥಾನ ಲೋಕಾರ್ಪಣೆಗೊಂಡಿತು. ಅಪಾರ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಸಾಮೂಹಿಕ ಅನ್ನ ದಾಸೋಹ ನಡೆಯಿತು.
0 Comments