ಅರಕಲಗೂಡು: ರೋಚಕ ಸೆಣಸಾಟದಲ್ಲಿ ತಾಲೂಕಿನ ಮಲ್ಲಿಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ಹಮ್ಮಿಕೊಂಡಿದ್ದ ಮಲ್ಲಿಪಟ್ಟಣ ಪ್ರೊ ಕಬಡ್ಡಿ ಲೀಗ್ ಸೀಜನ್ 2 ಪುನೀತ್ ಕಪ್ ಪಂದ್ಯಾವಳಿಗೆ ತೆರೆ ಬಿದ್ದಿದ್ದು. ಎಸ್.ಜಿ. ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಧರ್‌ಗೌಡ ಮಾಲೀಕತ್ವದ ತಂಡ ವಜ್ರಮುನಿ ಅಟ್ಯಾಕರ್ ಪ್ರಥಮ ಸ್ಥಾನ ಪಡೆದು ಗೆಲುವಿನ ನಗು ಬೀರಿತು.
ಪ್ರಥಮ ಬಹುಮಾನ ಪಡೆದ ಶ್ರೀಧರ್‌ಗೌಡ ಮಾಲೀಕತ್ವ ತಂಡದ ಆಟಗಾರರಿಗೆ 66 ಸಾವಿರ ರೂ ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಎಂಆರ್ ಹಂಟರ್ಸ್ 44 ಸಾವಿರ ರೂ ಟ್ರೋಫಿ, ತೃತೀಯ ಸ್ಥಾನ ಗಳಿಸಿದ ಕಾಮದೇನು ಫಾಮರ‍್ಸ್ ಫೈಟರ್ ತಂಡಕ್ಕೆ 33 ಸಾವಿರ ರೂ ಟ್ರೋಫಿ ಹಾಗೂ ಡಾ. ವಿಶ್ವನಾಥ್ ಮಾಲೀಕತ್ವದ ಲಕ್ಷö್ಮಣ್ ವಿ. ಚಾಂಪಿಯನ್ ತಂಡದ ಆಟಗಾರರು ನಾಲ್ಕನೇ ಬಹುಮಾನವಾಗಿ 22 ಸಾವಿರ ರೂ ಮತ್ತು ಟ್ರೋಪಿ ಎತ್ತಿಕೊಂಡು ಸಂಭ್ರಮಿಸಿದರು.
ಪAದ್ಯಾವಳಿ ನೇತೃತ್ವ ವಹಿಸಿದ್ದ ಮುಖಂಡ ಸಿಂಗನಕುಪ್ಪೆ ಸುರೇಶ್, ಮನೇಹಳ್ಳಿ ತಪೋವನ ಮಠದ ಶ್ರೀ ಮಹಂತೇಶ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ವೀರಶೈವ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರು ಪ್ರಶಸ್ತಿ ವಿತರಿಸಿದರು.
ಅಗಲಿದ ಚಿತ್ರನಟ ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಕತ್ತಲೆಯಲ್ಲಿ ಮೊಬೈಲ್ ಬೆಳಕು ತೋರಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಬಡ್ಡಿ ತಂಡದ ಮಾಲೀಕರು ಹಾಗೂ ವಿವಿಧ ಸಮಾಜ ಸೇವಕರು ಮತ್ತು ಗಣ್ಯರನ್ನು ಸನ್ಮಾನಿಸಲಾಯಿತು.
0 Comments