ಸರ್ಕಾರಿ ಆಸ್ತಿ ಉಳಿಸುವಂತೆ ರಶ್ಮಿ, ರಮೇಶ್ ವಾಟಾಳ್ ಒತ್ತಾಯ; ಶಾಸಕರ ಪ್ರಾಮಾಣಿಕತೆ ಪ್ರಶ್ನಿಸಿದ ವಾಟಾಳ್

ಅರಕಲಗೂಡು: ಪಟ್ಟಣದ ವಿವಿಧೆಡೆ ಸರ್ಕಾರಿ ಆಸ್ತಿ ಕಬಳಿಕೆಯಾಗುತ್ತಿದೆ. ಹಲಗೇರಿ ರಸ್ತೆಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳನ್ನು ತೆರವುಗೊಳಿಸಲು ಪಪಂ ಅಗ್ಯತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಅಬ್ದುಲ್ ಬಾಸಿದ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯೆ ರಶ್ಮಿ ಮಾತನಾಡಿ, ಪಟ್ಟಣದಲ್ಲಿ ಸರ್ಕಾರಿ ಆಸ್ತಿಯಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿದ್ದರೂ ಪಪಂ ಆಡಳಿತ ಕಣ್ಮುಚ್ಚಿ ಕುಳಿತಿದೆ.

ಹಲಗೇರಿ ರಸ್ತೆ ಬದಿ ಅಕ್ರಮವಾಗಿ ತಲೆತ್ತಿರುವ ಮನೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿರುವುದು ತಲೆತಗ್ಗಿಸುವ ಸಂಗತಿಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಐತಿಹಾಸಿಕ ಹಲಗೇರಿ ರಸ್ತೆಯಲ್ಲಿ ನಿರ್ಮಿಸಿರುವ ಮನೆಗಳನ್ನು ತೆರವುಗೊಳಿಸುವ ಸಂಬAಧ ಕ್ರಮ ಕೈಗೊಳ್ಳುವಂತೆ ಬರುವ ಸೋಮವಾರ ಸದಸ್ಯರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸದಸ್ಯೆ ರಶ್ಮಿ ಮಾತನಾಡಿ, ಸಾಮಾನ್ಯ ಸಭೆಯಲ್ಲಿ ಹಿಂದಿನ ಸಭೆಯಲ್ಲಿ ನಡೆದ ನಡಾವಳಿಯನ್ನು ಓದಿ ರೆಕಾರ್ಡ ಮಾಡುವ ಸಂದರ್ಭದಲ್ಲಿ ಕಳೆದ ಸಭೆಯಲ್ಲಿ ಚರ್ಚೆಗಳೇ ಆಗದೆ ಸಭೆಯ ನಂತರ ಅಧಿಕಾರಿಗಳು, ಅಧ್ಯಕ್ಷರು ಕಾಮಗಾರಿಗಳನ್ನು ಮತ್ತು ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ಆಯ್ಕೆ ಮಾಡಿಕೊಳ್ಳುವ ನಿರ್ಧಾರವನ್ನು ಸಭೆಯ ಗಮನಕ್ಕೆ ತರದೆ ನಮೂದಿಸಿರುವುದು ಚುನಾಯಿತ ಪ್ರತಿನಿಧಿಗಳಿಗೆ ಮಾಡಿರುವ ಅಗೌರವಾಗಿದೆ. ಇಂತಹ ತೀರ್ಮಾನಗಳು ಕಾನೂನು ಬಾಹಿರ. ಇದಲ್ಲದೆ ಒಂದೇ ಕಾಮಗಾರಿಯನ್ನು ಬೇರೆ ಬೇರೆ ಯೋಜನೆಗಳಲ್ಲಿ ನಮೂದಿಸಿ ಟೆಂಡರ್‌ಗೆ ಅನುಮೋದನೆ ಪಡೆದಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ. ಪಪಂಚಾಯಿತಿಯ ಹಣ ದುರುಪಯೋಗ ಆಗುತ್ತಿರುವ ಅನುಮಾನವಿದೆ. ಸದಸ್ಯರು ಜಾಗೃತರಾಗಿ ಪರಿಶೀಲಿಸದಿದ್ದರೆ ಸಾರ್ವಜನಿಕರ ತೆರಿಗೆ ಹಣ ಲೂಟಿಯಾಗುತ್ತದೆ. ಕೆಲವು ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವುದು ಎದ್ದುಕಾಣಿಸುತ್ತದೆ. ಅತ್ತಿಉಲ್ಲಾ ಅವರ ಮನೆಯಿಂದ ತಾರಾ ಹಾಸ್ಪಿಟಲ್ ವರೆಗಿನ ರಸ್ತೆ ಅಭಿವೃದ್ಧಿಗೆ ಕಳೆದ ಜನವರಿಯಲ್ಲಿ ಶಾಸಕರು ಭೂಮಿಪೂಜೆ ನಡೆಸಿದರು. ಕಾಮಗಾರಿಯನ್ನೇ ಆರಂಭಿಸದೆ ಮತ್ತೆ ಅದೇ ಕಾಮಗಾರಿಯನ್ನು ಸಭೆಗೆ ಅನುಮೋದನೆಗೆ ಇಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಧನಿಗೂಡಿಸಿದ ಸದಸ್ಯ ವಾಟಾಳ್ ರಮೇಶ್ ಮಾತನಾಡಿ, ಪಟ್ಟಣ ಪಂಚಾಯಿತಿಯಲ್ಲಿ ನಡೆಯುವ ಹಲವು ಕಾಮಗಾರಿಗಳಲ್ಲಿ ಅಕ್ರಮ ನಡೆಸಲಾಗುತ್ತಿದೆ. ಶಾಸಕರು ಪಾರದರ್ಶಕÀತೆ ಮತ್ತು ಭ್ರಷ್ಟಚಾರ ಮುಕ್ತ ಮಾಡುವ ಬಗ್ಗೆ ಮಾತನಾಡುವ ಶಾಸಕರು ಯಾಕೆ ಗಮನ ಹರಿಸುತ್ತಿಲ್ಲ. ಭ್ರಷ್ಟಾಚಾರ ವ್ಯವಸ್ಥೆಗೆ ಕಡಿವಾಣ ಬೀಳದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತಿದೆ ಎಂದು ಸಭೆಯಲ್ಲಿ ಗುಡುಗಿದರು.

ಪಂಚಾಯಿತಿಯಲ್ಲಿ ವಿಶೇಷ ಸಭೆಯನ್ನು ಕರೆಯಲು ಅವಕಾಶವಿದ್ದರೂ ಸದಸ್ಯರಿಗೆ ಮರೆಮಾಚುವ ದುರುದ್ದೇಶದಿಂದ ಅಧಿಕಾರಿಗಳು ತಮಗೆ ಬೇಕಾಗುವ ರೀತಿಯಲ್ಲಿ ಘಟನೋತ್ತರ ಮಂಜೂರಾತಿ ಹೆಸರಿನಲ್ಲಿ ಕೋಟ್ಯಾಂತರ ರೂ ವೆಚ್ಚದ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಸದಸ್ಯರ ರಶ್ಮಿ ದೂರಿದರು. 

ಮಧ್ಯಪ್ರವೇಶಿಸಿ ಮಾತನಾಡಿದ ಮಾಜಿ ಉಪಾಧ್ಯಕ್ಷ ನಿಖಿಲ್ ಕುಮಾರ ತುರ್ತು ಸಂದರ್ಭದಲ್ಲಿ ಕುಡಿಯುವ ನೀರು ಮತ್ತು ರಸ್ತೆ ಸಮಸ್ಯೆಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದರೆ ಮಾತ್ರ ಘಟನೋತ್ತರ ಮಂಜೂರಾತಿಗೆ ಅವಕಾಶವಿರುತ್ತದೆ. ನಿಯಮವನ್ನ ಉಲ್ಲಂಘಿಸಿ ಅನಾವಶ್ಯಕವಾದ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದು ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಇದು ಮರುಕಳಿಸದಂತೆ ಜಾಗೃತಿ ವಹಿಸಬೇಕು ಎಂದರು.
ಪಟ್ಟಣದ ಸ್ವಚ್ಚತೆ ಕೆಲಸಕ್ಕೆ ಬಳಸಿಕೊಳ್ಳಬೇಕಾದ ಕೆಲವು ಪೌರ ಕಾರ್ಮಿಕರನ್ನು ಕಚೇರಿ ಸಿಬ್ಬಂದಿ ಜತೆಗೆ ಕೆಲಸ ಮಾಡಲು ಆದ್ಯತೆ ನೀಡಲಾಗುತ್ತಿದೆಹಂಗಾಮಿ ಪೌರ ಕಾರ್ಮಿಕರಿಗೆ ಎರಡು ತಿಂಗಳಿAದ ವೇತನ ನೀಡಿಲ್ಲ. ಪಂಚಾಯತಿ ಆರೋಗ್ಯ ಡಾಟಾ ಎಂಟ್ರಿ ಮಾಡುವ ನೌಕರರ ನೇಮಕದಲ್ಲೂ ಮಾನದಂಡಗಳನ್ನು ಅನುಸರಿಸಿಲ್ಲ. ಪೌರ ಕಾರ್ಮಿಕರು ಮತ್ತು ಸಿಬ್ಬಂದಿ ಲೆಕ್ಕ ಪಟ್ಟಿ ಒದಗಿಸಬೇಕು ಎಂದು ಸದಸ್ಯರಾದ ರಶ್ಮಿ, ನಿಖಿಲ್ ಕುಮಾರ್ ಅವರು ಮುಖ್ಯಧಿಕಾರಿ ಶಿವಕುಮಾರ್ ಅವರನ್ನು ಸಭೆಯಲ್ಲಿ ಒತ್ತಾಯಿಸಿದರು.

ಸ್ಥಳೀಯ ಯೋಜನಾ ಪ್ರಾಧಿಕಾರ ಕಚೇರಿಗೆ ಪಂಚಾಯಿತಿಯ ಒಬ್ಬ ಸದಸ್ಯರನ್ನು ನೇಮಕ ಮಾಡುವ ಸಂಬAಧ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಗದ್ದಲ ಏರ್ಪಟ್ಟಿತ್ತು. 

ಅಧ್ಯಕ್ಷ ಅಬ್ದುಲ್ ಬಾಷಿದ್ ಮಾತನಾಡಿ, ಇದು ನನ್ನ ಮೊದಲ ಸಭೆಯಾಗಿದೆ. ಈ ಕುರಿತು ಅಧಿಕಾರಿಗಳಿಂದ ವಿವರಣೆ ಪಡೆದು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜಾಗೃತಿ ವಹಿಸುವುದಾಗಿ ತಿಳಿಸಿದರು.

Post a Comment

0 Comments