ಕತ್ತಿಮಲ್ಲೇನಹಳ್ಳಿ ಗ್ರಾಪಂ ಅಧ್ಯಕ್ಷೆಯಾಗಿ ಆಶಾ ಆಯ್ಮೆ


ಅರಕಲಗೂಡು: ತಾಲೂಕಿನ ಕತ್ತಿಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಶಾ ಶುಕ್ರವಾರ ಚುನಾಯಿತರಾದರು.

ಈ ಹಿಂದೆ ಅಧ್ಯಕ್ಷರಾಗಿ ಈರಣ್ಣ ರಾಜೀನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಶಾ ಅವರಿಗೆ 5 ಮತ್ತು ಪ್ರತಿಸ್ಪರ್ಧಿ ನೀಲಕಂಠಪ್ಪ ಅವರಿಗೆ 4 ಮತಗಳು ಲಭಿಸಿದವು.

ತಾಪಂ ಇಒ ರವಿಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

Post a Comment

0 Comments