ಅರಕಲಗೂಡು: ತಾಲೂಕಿನ ಹೊಳಲಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಸೋಮಶೇಖರ್ ಚುನಾಯಿತರಾದರು.
ಈ ಹಿಂದೆವಅಧ್ಯಕ್ಷರಾಗಿದ್ದ ಗೌರಮ್ಮ ರಾಜೀನಾಮೆ ನೀಡಿದ್ದು ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸೋಮಶೇಖರ್ ಅವರಿಗೆ 7 ಮತ ಹಾಗೂ ಪ್ರತಿಸ್ಪರ್ಧಿ ರವಿಚಂದ್ರ ಅವರಿಗೆ 4 ಮತಗಳು ಬಂದವು.
ತಾಪಂ ಇಒ ರವಿಕುಮಾರ್, ಪಿಡಿಒ ಗೋಪಾಲ ಚುನಾವಣಾ ಕಾರ್ಯ ನಿರ್ವಹಿಸಿದರು.
ಬೆಂಬಲಿಗರು ಗ್ರಾಮದ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮುಖಂಡ ಸಿಂಗನಕುಪ್ಪೆ ಸುರೇಶ್ ಮಾತನಾಡಿ, ಹೊಸದಾಗಿ ಚುನಾಯಿತರಾದ ಅಧ್ಯಕ್ಷರು ಪಕ್ಷಾತೀತವಾಗಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಮಾಜಿ ಸಚಿವ ಎ. ಮಂಜು ಅವರ ಮಾರ್ಗದರ್ಶನದಲ್ಲಿ ಚುನಾಯಿತರಾಗಿದ್ದು ಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ಮುಖಂಡರಾದ ಮಾಗಲು ಪಾಪಣ್ಣ, ವಿನಯ್, ವೇದರಾಜ್, ರಿಜ್ವಾನ್, ಯೋಗೇಶ್, ಮಂಜು, ಲೋಕೇಶ್ ಇನ್ನಿತರರು ಇದ್ದರು.
0 Comments