ಅರಕಲಗೂಡು: ಹೊಳೆನರಸೀಪುರ ತಾಲೂಕಿನ ಕಡವಿನಕೋಟೆ 220 ಕೆವಿ ವಿದ್ಯುತ್ ಕೇಂದ್ರದಿಂದ 66 ಕೆವಿ ಅರಕಲಗೂಡು ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ 66 ಕೆವಿ ವಿದ್ಯುತ್ ಮಾರ್ಗಗಳಲ್ಲಿ ತುರ್ತು ಕಾಮಗಾರಿ ಕೈಗೊಂಡಿರುವುದರಿಂದ ದಿನಾಂಕ 05/02/2022 ರ ಶನಿವಾರ ಮತ್ತು 06/03/2022 ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಬೇಕು ಎಂದು ಕಾರ್ಯಪಾಲಕ ಇಂಜಿನಿಯರ್ ಇಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಕಲಗೂಡು ದೊಡ್ಡಮಗ್ಗೆ ಮಲ್ಲಿಪಟ್ಟಣ ಶನಿವಾರಸಂತೆ ಹೆತ್ತೂರು ಯಶಳೂರು ಮತ್ತು ಅಡಿಕೆ ಬೊಮ್ಮನಹಳ್ಳಿ ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
0 Comments