ಅರಕಲಗೂಡು: ತಾಲೂಕಿನ ಸೀಬಳ್ಳಿ ಗ್ರಾಮದಲ್ಲಿ ಶನಿವಾರ ವಾಸದ ಮನೆÉಗೆ ವಿದ್ಯುತ್ ಶಾರ್ಟ್ ಸರ್ಕಿಟ್ ಸಂಭವಿಸಿ ಸಂಪೂರ್ಣ ಸುಟ್ಟು ಹಾನಿಗೀಡಾಗಿದೆ.
ಗ್ರಾಮದ ಶ್ರೀಕಂಠಪ್ಪ ಎಂಬುವರಿಗೆ ಸೇರಿದ ಮನೆಗೆ ವಿದ್ಯುತ್ ಸ್ಪರ್ಶಿಸಿ ಬೆಂಕಿ ಅವಘಡ ಸಂಭವಿಸಿದೆ. ಪರಿಣಾಮವಾಗಿ ಮನೆಯಲ್ಲಿದ್ದ ದಿನಸಿ ಆಹಾರ ಪದಾರ್ಥಗಳು, ಮಂಚ, ಟೇಬಲ್, ಬೀರು, ನಗದು, ಮೇಲ್ಚಾವಣಿ, ಅಟ್ಟದ ಮೇಲಿದ್ದ ತೆಂಗಿನ ಕಾಯಿಗಳು, ಪಿಠೋಪಕರಗಳು ಸೇರಿದಂತೆ ಅಪಾರ ಪ್ರಮಾಣದ ಬೆಲೆ ಬಾಳುವ ವಸ್ತುಗಳು ಬೆಂಕಿಗೆ ಬೆಂದು ಆಹುತಿಯಾಗಿವೆ.
ವಿಷಯ ತಿಳಿದು ಅರಕಲಗೂಡು ಅಗ್ನಿ ಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವಷ್ಟರಲ್ಲೇ ಮನೆ ಸಂಪೂರ್ಣ ಬೆಂಕಿ ಹೊತ್ತಿಕೊಂಡು ಭಸ್ಮವಾಗಿತ್ತು. ಗ್ರಾಪಂ ಪಿಡಿಒ ಬೋರೇಗೌಡ, ರಾಜಸ್ವ ನಿರೀಕ್ಷಕ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
0 Comments