ಅರಕಲಗೂಡು: ರಾಜ್ಯದ ಒಕ್ಕಲಿಗರ ಸಂಘಕ್ಕೆ ಭಾನುವಾರ ನಡೆದ ಚುನಾವಣೆ ಶಾಂತಿಯುತವಾಗಿದ್ದು ಶೇ 83.56 ಮತದಾನವಾಯಿತು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನಕ್ಕೆ 6 ಬೂತ್ ಗಳನ್ನು ತೆರೆಯಲಾಗಿತ್ತು. ಒಟ್ಟು 2915 ಮತದಾರರು ಇದ್ದು 2436 ಮಂದಿ ಮತ ಚಲಾಯಿಸಿದರು.
ಇವರಲ್ಲಿ 1774 ಪುರುಷರು ಹಾಗೂ 662 ಮಂದಿ ಮಹಿಳೆಯರಿದ್ದರು ಎಂದು ಸಹಾಯಕ ಚುನಾವಣಾ ಅಧಿಕಾರಿ ಎಂ.ಆರ್. ಹರೀಶ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.
0 Comments