ಅರಕಲಗೂಡು: ಕಸಾಪ‌ ಶೇ. ೬೪ ಮತದಾನ; ಮಲ್ಲೇಶಗೌಡ, ಮಹೇಶ್ ಜೋಷಿ ಮೇಲುಗೈ

ಅರಕಲಗೂಡು:  ಕನ್ನಡ ಸಾಹಿತ್ಯ ಪರಿಷತ್  ಜಿಲ್ಲಾ ಮತ್ತು ರಾಜ್ಯ ಅಧ್ಯಕ್ಷ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ   ಮಲ್ಲೇಶ್ ಗೌಡ ಮತ್ತು ಮಹೇಶ್ ಜೋಶಿ ಹೆಚ್ಚಿನ ಮತ ಪಡೆದಿದ್ದಾರೆ. 

513 ಮತದಾರರಲ್ಲಿ 325 ಮಂದಿ ಮತಚಲಾಯಿಸಿದ್ದು ಶೇ 63 ರಷ್ಟು ಮತದಾನವಾಯಿತು. ಸಂಜೆ ಮತಗಳ  ಎಣಿಕೆ ಕಾರ್ಯ ನಡೆಯಿತು. ಜಿಲ್ಲಾ ಅಧ್ಯಕ್ಷ ಸ್ಥಾನದ ಸ್ಪರ್ಧಿ ಮಲ್ಲೇಶ್ ಗೌಡ 159, ರವಿ ನಾಕಲಗೂಡು 133, ಗಂಜಲಗೂಡು ಗೋಪಾಲೇಗೌಡ 28, ಮಮತ 1 ಹಾಗೂ ಆರ್.ಕೆ ಶರ್ಮ 1 ಮತ ಪಡೆದರು.  ಮೂರು ಮತಗಳು ತಿರಸ್ಖೃತಗೊಂಡವು. 

ರಾಜ್ಯಾಧಱಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಹೇಶ್ ಜೋಶಿ144, ಚನ್ನೇಗೌಡ 88 ಹಾಗೂ ರಾಮೇಗೌಡ 33 ಮತಗಳನ್ನು ಪಡೆದರು.  ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಚುನಾವಣಾ ಕರ್ತವ್ಯ ನಿರ್ವಹಿಸಿದರು.

Post a Comment

0 Comments