ಬ್ರಾಹ್ಮಣ ಸಮಾಜ ಜಗತ್ತಿನ ಹಿತ ಬಯಸುತ್ತದೆ; ಶಕಟಪುರ ಕೃಷ್ಣಾನಂದ ಸ್ವಾಮೀಜಿ

ಅರಕಲಗೂಡು:  ಬ್ರಾಹ್ಮಣ ಸಮುದಾಯ ಸಂಪ್ರದಾಯ ತೊರೆಯದಿರಲಿ, ತನ್ನದೇ ಆದ  ವಿಶಿಷ್ಟವಾದ  ಆಚರಣೆ, ಸಂಪ್ರದಾಯ ಮತ್ತು ನಂಬಿಕೆಗಳನ್ನು  ಆಚರಿಸಿಕೊಂಡು ಬರುತ್ತಿದ್ದು ಜಗತ್ತಿನ  ಎಲ್ಲರ ಹಿತವನ್ನು ಬಯಸುತ್ತಾ ಬಂದಿದೆ ಎಂದು ಶಕಟಪುರದ ಕೃಷ್ಣಾನಂದ ತೀರ್ಥ ಸ್ವಾಮೀಜಿ ತಿಳಿಸಿದರು. 

ಪಟ್ಟಣದ ಕೋಟೆ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ  ಬ್ರಾಹ್ಮಣ ಸಮುದಾಯ ಭವನವನ್ನು ಸೋಮವಾರ ಲೋಕಾರ್ಪಣೆ ಗೊಳಿಸಿ ನಂತರ ನಡೆದ  ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ  ಅವರು, ಕೇವಲ ಹೆಸರಿಗಷ್ಟೆ  ಬ್ರಾಹ್ಮಣರಾದರೆ ಸಾಲದು, 

ಈ ಸಮುದಾಯಕ್ಕೆ ನಿಗದಿಪಡಿಸಿರುವ ಆಚಾರ ವಿಚಾರಗಳನ್ನು ಸ್ವಲ್ಪಮಟ್ಟಿಗಾದರೂ ಅನುಷ್ಠಾನದಲ್ಲಿ  ಇಟ್ಟುಕೊಂಡಾಗ ಮಾತ್ರ ಆತನಿಗೆ ಸಮಾಜದಲ್ಲಿ ಗೌರವ ದೊರೆಯಲು ಸಾಧ್ಯ ಎಂದರು. ತಾವು ಪೂರ್ವಾಶ್ರಮದಲ್ಲಿ ಪಟ್ಟಣದಲ್ಲೆ ಬಾಲ್ಯ ಜೀವನವನ್ನು ಕಳೆದಿದ್ದು ಈ ಊರನ್ನು ಕಂಡರೆ ವಿಶೇಷ  ಪ್ರೀತಿ ಇದ್ದು ಇಲ್ಲಿ ನಡೆಯುವ  ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ತಾವು ಉತ್ಸುಕರಾಗಿರುವುದಾಗಿ  ಹೇಳಿದರು.

  ರಾಜ್ಯ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ  ಹಾರನಹಳ್ಳಿ ಆಶೋಕ್  ಮಾತನಾಡಿ, ಶಂಕರಾಚಾರ್ಯರ  ಸಾಧನೆ ಜಗತ್ತಿಗೆ ಅರಿವಾಗುತ್ತಿರುವುದು ಸಂತಸದ ವಿಚಾರವಾಗಿದೆ, ಧರ್ಮದ ಸಂವರ್ಧನೆಗೆ ಕಾರ್ಯ ನಿರ್ವಹಿಸುತ್ತಿರುವ ಮಠಗಳ ಪರಿಕಲ್ಪನೆಯನ್ನು ಜಗತ್ತಿಗೆ ಮೊಟ್ಟ ಮೊದಲ ಬಾರಿಗೆ ಕೊಟ್ಟೊರುವುದು ಶಂಕರರ ಬಹುದೊಡ್ಡ ಕೊಡುಗೆಯಾಗಿದೆ. ಸನಾತನ ಧರ್ಮವನ್ನು ಉಳಿಸಿ ಬೆಳೆಸುವ ಹೊಣೆ ವಿಪ್ರ ಸಮಾಜದ ಮೇಲೆಇದೆ ಎಂದರು.
 ಬ್ರಾಹ್ಮಣ  ಅಭಿವೃದ್ಧಿ ಮಂಡಳಿ ಸದಸ್ಯ ಛಾತಾಪತಿ ಮಮಡಳಿ ಸಮುದಾಯದ ಻ಭಿವೃದ್ದಿಗೆ ಕೈಗೊಂಡಿರುಇವ ಕಾರ್ಯಗಳ ಕುರಿತು  ವಿವರಿಸಿದರು. ಹೈಕೋರ್ಟ್ ನಿವೃತ್ತ ನ್ಯಾಯಾಧೀಶ  ಎ.ವಿ. ಚಂದ್ರಶೇಖರ್,  ಕರ್ನಾಟಕ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ  ಎಂ.ಎಸ್.ಮಹಾಬಲೇಶ್ವರ್, ಶಕಟಪುರ ಮಹಾಸಂಸ್ಥಾನ ಮಠದ ಆಡಳಿತಾಧಿಕಾರಿ ಚಂದ್ರಮೌಳೀಶ್ವರನ್ ಮಾತನಾಡಿದರು. 

ಮಾಜಿ ಸಚಿವ  ಎ.ಮಂಜು, ಜಿಲ್ಲಾ ಬ್ರಾಹ್ಮಣ  ಮಹಾಸಭಾ ಅಧ್ಯಕ್ಷ  ಎಚ್.ವಿ.ಶ್ರೀನಿವಾಸ ಮೂರ್ತಿ, ಕಾರ್ಯದರ್ಶಿ ಚಂದ್ರಶೇಖರ್,   ನಗರ ಬ್ರಾಜ್ಮಣ ಸಭಾ ಅಧ್ಯಕ್ಷ  ಎ.ಎಸ್.ರಾಮಸ್ವಾಮಿ, ಕಾರ್ಯದರ್ಶಿ ಎ.ಎನ್.ಗಣೇಶಮೂರ್ತಿ, ಸಮುದಾಯ ಭವನ ನಿರ್ಮಾಣ  ಸಮಿತಿ  ಅಧ್ಯಕ್ಷ ಕೆ.ನಂಜುಂಡಸ್ವಾಮಿ, ಕಾರ್ಯದರ್ಶಿ ಎ.ಎಸ್. ಹಿರಿಯಣ್ಣ  ಯ್ಯ, ಖಜಾಂಚಿ ಎಚ್. ಜಿ.ರಮೇಶ್ ಉಪಸ್ಥಿತರಿದ್ದರು.
ಸಮುದಾಯ ಭವನಕ್ಕೆ ಕರ್ನಾಟಕ ಬ್ಯಾಂಕ್ ವತಿಯಿಂಧ ಸೋಲಾರ್ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು. ಭವನದ ನಿರ್ಮಾಣಕ್ಕೆ ನೆರವಾದ ದಾನಿಗಳನ್ನು ಕಾರ್ಯಕ್ರಮದಲ್ಲಿ  ಗೌರವಿಸಲಾಯಿತು.

Post a Comment

0 Comments