ಮುರಾರ್ಜಿ ಶಾಲೆ ಮಕ್ಕಳಿಗೆ ಕೋವಿಡ್ ಸೋಂಕು: ಆತಂಕ

ಅರಕಲಗೂಡು:   ಪಟ್ಟಣದ ಹೊರ ವಲಯದಲ್ಲಿರುವ  ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯ 15 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು ಸಾರ್ವ ಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. 

ಶಾಸಕ ಎ.ಟಿ.ರಾಮಸ್ವಾಮಿ ಬುಧವಾರ ಆಸ್ಪತ್ರೆಗೆ  ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,  ವಸತಿ ಶಾಲೆಯಲ್ಲಿ 150 ಮಂದಿ ವಿದ್ಯಾರ್ಥಿಗಳು ಇದ್ದು ಎಲ್ಲರೂ ದೀಪಾವಳಿ ಹಬ್ಬದ ರಜೆಯಲ್ಲಿ ಊರಿಗೆ ತೆರಳಿದ್ದರು. ಇವರಲ್ಲಿ 110 ಮಂದಿ ವಿದ್ಯಾರ್ಥಿಗಳು ಸೋಮವಾರ ಶಾಲೆಗೆ ವಾಪಾಸ್ಸಾಗಿದ್ದರು ಇವರಲ್ಲಿ 15  ಮಂದಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು  ಚಿಕಿತ್ಸೆಗೆ ದಾಖಲಿಸಲಾಗಿದೆ.

 ಉಳಿದ ವಿದ್ಯಾರ್ಥಿಗಳಿಗೆ ಕೋವಿಡ್  ಪರೀಕ್ಷೆ ನಡೆಸಿದ್ದು   ಎಲ್ಲ  ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕುರಿತು ಆತಂಕ  ಪಡುವ ಅಗತ್ಯವಿಲ್ಲ  ಎಂದರು. 
ಪಪಂ ಅಧ್ಯಕ್ಷ ಹೂವಣ್ಣ, ಸದಸ್ಯರಾದ ಪ್ರದೀಪ್ ಕುಮಾರ್, ಕೃಷ್ಣಯ್ಯ, ಸುಬಾನ್ ಷರೀಪ್, ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.

Post a Comment

0 Comments