ಅರಕಲಗೂಡು : ಕನ್ನಡ ಚಲನ ಚಿತ್ರ ನಟ ಪುನೀತ್ ರಾಜ ಕುಮಾರ್ ಅವರ ಪುಣ್ಯ ತಿಥಿ ಅಂಗವಾಗಿ ಪಟ್ಟಣದಲ್ಲಿ ಮಂಗಳವಾರ ಅಭಿಮಾನಿಗಳು ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಡಾ. ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ಸಹಯೋಗದಲ್ಲಿ ಇಂದಿರಾ ಕ್ಯಾಂಟೀನ್ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಪುನೀತ್ ಅವರ ಭಾವಚಿತ್ರಕ್ಕೆ ಎಡೆ ಅರ್ಪಸಿ ಪುಷ್ಪ ನಮನ ಸಲ್ಲಿಸಲಾಯಿತು. ಇಂದಿರಾ ಕ್ಯಾಂಟೀನ್ ಆವರಣದಲ್ಲಿ ಸಾಂಕೇತಿಕವಾಗಿ ಗಿಡಗಳನ್ನು ನೆಡಲಾಯಿತು. 68 ಮಂದಿ ಸ್ವಯಂ ಪ್ರೇರಿತರಾಗಿ ನೇತ್ರದಾನಕ್ಕೆ ಹೆಸರು ನೊಂದಾಯಿಸಿಕೊಂಡರು.
ಈ ವೇಳೆ ಮಾತನಾಡಿದ ಪಪಂ ಸದಸ್ಯ ವಾಟಾಳ್ ರಮೇಶ್ ಪುನೀತ್ ರಾಜ್ ಕುಮಾರ್ ತಮ್ಮ ತಂದೆಯ ಹಾದಿಯಲ್ಲೆ ನಡೆದು ಸಮಾಜಕ್ಕೆ ಬಹುದೊಡ್ಡ ಮಟ್ಟದಲ್ಲಿ ಸೇವೆ ನೀಡಿದ್ದು ಇದು ಅನುಕರಣೀಯ. ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಮಾಜ ಮುಖಿ ಕಾರ್ಯಗಳ ಮೂಲಕ ಇವರ ಆದರ್ಶಗಳನ್ನು ಪಾಲಿಸಲಾಗುವುದು ಎಂದರು.
ಶಿವರಾಜ್ ಕುಮಾರ್ ಅಭಿಮಾನಿ ಸಂಘದ ಜಿಲ್ಲಾ ಅಧ್ಯಕ್ಷ ರಿತೇಶ್ ಕುಮಾರ್ ಮಾತನಾಡಿ ರಾಜ್ ಕುಟುಂಬ ಹಲವು ರೀತಿಯ ಸಮಾಜ ಮುಖಿ ಕಾರ್ಯಗಳನ್ನು ನಡೆಸಿದ್ದರೂ ಯಾವುದೇ ಪ್ರಚಾರ ಪಡೆಯುತ್ತಿರಲಿಲ್ಲ. ಪುನೀತ್ ತಮ್ಮ ಚಿತ್ರಗಳು ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ನಮ್ಮೊಡನೆ ಸದಾ ಇರುತ್ತಾರೆ ಎಂದರು. ಬಳಿಕ 2600 ಮಂದಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಇದೇ ವೇಳೆ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಕೋರಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಸಮಾಜ ಸೇವಕ ಎಂ.ಟಿ.ಕೃಷ್ಣೇಗೌಡ, ಸಿಪಿಐ ಸತ್ಯನಾರಾಯಣ್, ಅಭಿಮಾನಿ ಸಂಘದ ಮುಖಂಡರಾದ .ಮ.ರಾಮಚಂದ್ರ, ಎ.ವಿ.ಮೋಹನ್, ಎ.ಡಿ.ಶಿವಕುಮಾರ್,ಆಟೋ ವಿಜಯ್, ಜಿಮ್ ಶಸಿ, ಭೀಮರಾಜ್, ಲೋಕೇಶ್, ರವಿಕುಮಾರ್ ವಕಾರೆ, ಕೆ.ಎಸ್. ದಯಾನಂದ್,ಮಧು,ಹರೀಶ್, ಕುಶಾಲ,ರವಿ ಇದ್ದರು.
0 Comments