ಬಸವಾಪಟ್ಟಣ ಬಸವೇಶ್ವರ ದೇವಾಲಯ ಲೋಕಾರ್ಪಣೆ; ವಿಶೇಷ ಪೂಜೆ ಹೋಮ

ಅರಕಲಗೂಡು: ತಾಲೂಕಿನ ಬಸವಾಪಟ್ಟಣದಲ್ಲಿ ಶ್ರಿ ಬಸವೇಶ್ವರ ದೇವಸ್ಥಾನ ಧಾರ್ಮಿಕ ವಿಧಾನಗಳನ್ವಯ ಲೋಕಾರ್ಪಣೆಗೊಂಡಿತು.

ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ಹಾದು ಹೋದ ಹಿನ್ನಲೆಯಲ್ಲಿ ಗ್ರಾಮದ ಹಳೇ ಬಸ್ ನಿಲ್ದಾಣ ಸರ್ಕಲ್‌ನಲ್ಲಿದ್ದ ಹಳೆಯ ದೇವಸ್ಥಾನವನ್ನು ತೆರವುಗೊಳಿಸಿ ಕೆಶಿಪ್ ವತಿಯಿಂದ ಹೊಸದಾಗಿ ಜೀರ್ಣೋದ್ದಾರ ಪಡಿಸಲಾಗಿತ್ತು. ದೇವಸ್ಥಾನ ಉದ್ಘಾಟನೆ ಪ್ರಯುಕ್ತ ಬುಧವಾರ ವಿವಿಧ ಪೂಜಾ ವಿಧಾನಗಳ ವಿಧಿವತ್ತಾಗಿ ಜರುಗಿದವು.

ಪೂರ್ಣಕುಂಭ ಕಳಸ ಮೆರವಣಿಗೆ, ವೀರಗಾಸೆ ನೃತ್ಯ, ಮಂಗಳವಾದ್ಯದೊAದಿಗೆ ದೇವಸ್ಥಾನ ಪ್ರವೇಶಿಸಲಾಯಿತು.
ನೂತನ ದೇವಸ್ಥಾನದಲ್ಲಿ ಗುರುವಾರ ವಿಶೇಷ ಪೂಜಾ ಕೈಂಕರ್ಯಗಳು ಸಾಂಗವಾಗಿ ನಡೆದವು. ಮೂಲ ಬಸವೇಶ್ವರ ವಿಗ್ರಹಕ್ಕೆ ಬಗೆ ಬಗೆಯ ಹೂವಿನಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ದೇವಸ್ಥಾನದಲ್ಲಿ ಪೂರ್ಣಾಹುತಿ, ವಿವಿಧ ಹೋಮ, ಹವನ, ಅಷ್ಟಲಕ್ಷಿö್ಮÃ, ಕಳಸ ಪ್ರತಿಷ್ಠಾಪನೆ, ನವಗ್ರಹ ಪೂಜೆ ಸೇರಿದಂತೆ ಹಲವು ಧಾರ್ಮಿಕ ವಿಧಾನಗಳು ನೆರವೇರಿದವು.
ದೇವಸ್ಥಾನದಲ್ಲಿ ಅಪಾರ ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿದ್ದ ಜನರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪುನೀತರಾದರು. 
ದೇವಸ್ಥಾನ ಲೋಕಾರ್ಪಣೆ ಹಿನ್ನಲೆಯಲ್ಲಿ ಊರಿನಲ್ಲಿ ಕಳೆದೆರಡು ದಿನಗಳಿಂದ ಸಡಗರ, ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

Post a Comment

0 Comments