ದನಗಳ ಸಾಗಾಟದ ವಾಹನ ವಶಕ್ಕೆ ಪಡೆದ ಪೊಲೀಸರು; ಓರ್ವ ಬಂಧನ

ಅರಕಲಗೂಡು:  ಅಕ್ರಮವಾಗಿ ದನಗಳ ಸಾಗಣೆ ಮಾಡುತ್ತಿದ್ದ ಕ್ಯಾಂಟರ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ. 

ತಾಲ್ಲೂಕಿನ ಹೊಳಲಗೋಡು ಗ್ರಾಮದಲ್ಲಿ ಅಕ್ರಮ ಜಾನುವಾರು ಸಾಗಣೆ ಮಾಡುತ್ತಿರುವ ಕುರಿತು ಬಂದ ಖಚಿತ ಮಾಹಿತಿ ಆಧರಿಸಿ ಪಿಎಸ್ಐ ಮಾಲಾ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಮೈಸೂರು ಎನ್ ಆರ್ ಮೊಹಲ್ಲಾದ ಸಮೀವುಲ್ಲಾ ಎಂಬಾತನನ್ನು ವಶಕ್ಕೆ ಪಡೆದರು. 

ಈ ಕುರಿತು ಪ್ರಕರಣ ದಾಖಲಿಸಿ  ಜಾನುವಾರುಗಳನ್ನು ಮೈಸೂರಿನ ಗೋಶಾಲೆಗೆ ಕಳಿಸಿ ಕೊಡಯಿತು.

Post a Comment

0 Comments