ಅರಕಲಗೂಡು: ಕಾಡಾನೆ ಸಂಚಾರ, ತಾಲೂಕಿನ ಮುಂಡಗೋಡು ಗ್ರಾಮದಲ್ಲಿ ಬುಧವಾರ ಬೆಳಂ ಬೆಳಗ್ಗೆಯೇ ಪ್ರತ್ಯಕ್ಷವಾದ ಕಾಡಾನೆ ಬೆಳೆ ಜಮೀನು ತುಳಿದು ಹಾನಿಪಡಿಸಿ ಜನರಲ್ಲಿ ಭೀತಿ ಮೂಡಿಸಿದ್ದು ಇನ್ನೂ ಹಸಿರಾಗಿಯೇ ಚಡಪಡಿಸಿದೆ.
ಬನ್ನೇರುಘಟ್ಟದ ಹಿಂಡಿನಿAದ ತಪ್ಪಿಸಿಕೊಂಡು ಕುಣಿಗಲ್, ಹೊಳೆನರಸೀಪುರ ಮಾರ್ಗವಾಗಿ ಇತ್ತ ಧಾವಿಸಿದ ಕಾಡಾನೆ ಮುಂಡುಗೋಡಿನಲ್ಲಿ ಕಾಣಿಸಿಕೊಂಡಿದೆ. ರಾತ್ರಿಯಿಂದಲೂ ಬೆಳೆಗಳ ಮೇಲೆ ಸುತ್ತಾಡಿ ಬೆಳಗ್ಗೆ ಹೊತ್ತಿಗೆ ಗ್ರಾಮದೇವತೆ ದೇವಸ್ಥಾನ ಬಳಿ ನಿಂತಿದೆ. ಗ್ರಾಮಸ್ಥರನ್ನು ಕಂಡು ದೇವಸ್ಥಾನ ಬಳಿ ಗಾಬರಿಯೊಂದ ಆನೆ ದಿಕ್ಕಾಪಾಲಾಗಿ ಸುತ್ತಾಡಿ ಜೋಳದ ಹೊಲದಲ್ಲಿ ಸಂಚರಿಸಿದೆ.
ನಂತರ ನಾಟಿಯಾಗಿದ್ದ ಭತ್ತದ ಗದ್ದೆಗಳಿಗೆ ನುಗ್ಗಿದ ಆನೆ ಮನಬಂದAತೆ ಪೈರುಗಳನ್ನು ತುಳಿದು ಬಹಳ ಹೊತ್ತು ಅಡ್ಡಾಡಲು ಶುರು ಮಾಡಿತು. ಆನೆಯನ್ನು ಬೆನ್ನಟ್ಟಿದ ಗ್ರಾಮಸ್ಥರು ಓಡಿಸಲು ಹರಸಾಹಸ ಪಡುವಂತಾಗಿತ್ತು.
ಗ್ರಾಮಸüರಿAದ ಆನೆ ಲಗ್ಗೆಯಿಟ್ಟಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಜೋಲದ ಹೊಲದಲ್ಲಿ ಅವಿತಿದ್ದ ಆನೆ ಹುಡುಕಲು ಕೆಲಕಾಲ ತಡಕಾಡಿದರು. ಮಧ್ಯಾಹ್ನದ ವೇಳೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬೈಸೂರು ಅರಣ್ಯದ ಕಡೆಗೆ ಓಡಿಸಿದರು.
ಮುಂಡಗೋಡು ಭಾಗದಲ್ಲಿ ಕಾಡಾನೆ ತುಳಿದು ಭತ್ತ, ರಾಗಿ ಜೋಳದ ಬೆಳೆ ಹಾನಿಯಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಆನೆ ಕಾಣಿಸಿಕೊಂಡು ಜನರಲ್ಲಿ ಆತಂಕವಾಗಿದೆ. ಬೆಳಗ್ಗೆ ಮಾಹಿತಿ ನೀಡಿದರೂ ಆನೆ ಓಡಿಸಲು ಬಹಳ ತಡವಾಗಿ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತಳೆದರು ಎಂದು ಕರವೇ ಮುಖಂಡ ಸೋಮು ದೂರಿದರು.
ವಲಯ ಅರಣ್ಯಾಧಿಕಾರಿ ಅರುಣ್ ಕುಮಾರ್ ಮಾತನಾಡಿ, ಕಾಡಾನೆ ತುಳಿದು ಬೆಳೆ ನಾಶವಾಗಿರುವ ಕುರಿತು ರೈತರು ಅರ್ಜಿ ಸಲ್ಲಿಸಿದರೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
0 Comments