ಪಹಣಿ ಪೌತಿ ಖಾತೆ ತಿದ್ದುಪಡಿಗೆ ಮನೆ ಮನೆ ಭೇಟಿ ಇತ್ತ ಗ್ರಾಮ ಲೆಕ್ಕಾಧಿಕಾರಿಗಳು; ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಪರಿಶೀಲನೆ

ಅರಕಲಗೂಡು:  ತಾಲ್ಲೂಕಿನಲ್ಲಿ  ಪೌತಿ ಖಾತೆ, ಪಹಣಿ ತಿದ್ದುಪಡಿ ಹಾಗೂ ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಪಿಂಚಿಣಿ ಸೌಲಭ್ಯ ಒದಗಿಸುವ  ಬೃಹತ್ ಆಂದೋಲನ ಹಮ್ಮಿಕೊಂಡಿದ್ದು ಜನರು ಸಹಕಾರ ನೀಡುವಂತೆ  ತಹಶೀಲ್ದಾರ್  ವೈ.ಎಂ.ರೇಣುಕುಮಾರ್ ಮನವಿ ಮಾಡಿದರು. 
 ತಾಲ್ಲೂಕಿನ ಮುದಿಗೆರೆ,ಹಾರೋಹಳ್ಳಿ, ಕಲ್ಲೂರು, ಮುಂಡಗೋಡು ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಕಾರ್ಯಪ್ರಗತಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ  ಅವರು, ರೈತರು ಜಮೀನು ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಹಾಗೂ ವಿವಿಧ ಯೋಜನೆಯ ಪಿಂಚಿಣಿ ಸೌಲಭ್ಯ ಪಡೆಯಲು ಕಚೇರಿಗೆ ಅಲೆಯುವಂತಾಗಬಾರದು ಎಂಬ ಉದ್ದೇಶದಿಂದ ಸರ್ಕಾರ  ಆಂದೋಲನ ಹಮ್ಮಿಕೊಂಡಿದೆ. ಕಂದಾಯ  ಇಲಾಖೆ ನೌಕರರು ಮನೆ, ಮನೆಗೆ  ತೆರಳಿ  ಅಗತ್ಯ ಮಾಹಿತಿಗಳನ್ನು ಕಲೆ ಹಾಕಿ ರೈತರ ಜಮೀನು ದಾಖಲೆಗಳಲ್ಲಿ ದೋಷ ಕಂಡುಬಂದಲ್ಲಿ ಸರಿಪಡಿಸಲು ಕ್ರಮ ಕೈಗೊಳ್ಳುವರು.
 ನೌಕರರು ಮನೆಗೆ ಭೇಟಿ ನೀಡಿದ ವೇಳೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸುವಂತೆ ಮನವಿ ಮಾಡಿದರು. ತಾಲ್ಲೂಕಿನಲ್ಲಿ ಈಗಾಗಲೆ ಕಾರ್ಯಕ್ರಮಕ್ಕೆ  ಚಾಲನೆ ನೀಡಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಇದನ್ನು ಪೂರ್ಣಗೊಳಿಸುವ ಗುರಿ ಹೊಂದಿರುವುದಾಗಿ ಹೇಳಿದರು.

Post a Comment

0 Comments