ಅರಕಲಗೂಡು: ತಾಲೂಕಿನಲ್ಲಿ ಹಾದು ಹೋಗಿರುವ ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ವಿಸ್ತೀರ್ಣದಲ್ಲಿ ಲೋಪವೆಸಗಲಾಗುತ್ತಿದೆ, ಡಿಪಿಆರ್ ಬದಲಾಯಿಸಿ ಕ್ರಮಬದ್ದವಾಗಿ ಅಗಲೀಕರಣಗೊಳಿಸದಿದ್ದರೆ ಸಾರ್ವಜನಿಕರೊಂದಿಗೆ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದಾಗಿ ಮಾಜಿ ಸಚಿವ ಎ. ಮಂಜು ಎಚ್ಚರಿಕೆ ಕೊಟ್ಟಿದ್ದಾರೆ.
ನಾನು ಮಂತ್ರಿಯಾಗಿದ್ದಾಗ ಕಳೆದ ೨೦೧೬- ೧೭ರಲ್ಲ ಈ ರಸ್ತೆ ಮಂಜೂರಾಗಿದ್ದು ಕಾಮಗಾರಿ ತ್ವತರಿವಾಗಿ ಮುಗಿಸಲು ಪೂಜೆ ಸಹ ಮುಗಿಸಿದ್ದೆ. ಆದರೆ ಈಗ ಮತ್ತೊಮ್ಮೆ ತಾನು ಮಾಡಿಸಿರುವುದಾಗಿ ಭೂಮಿಪೂಜೆ ಮಾಡಿದವರು ರಸ್ತೆ ಕಾಮಗಾರಿ ಕಡೆಗೆ ನಿಗಾವಹಿಸದೆ ಇರುವುದರ ಹಿಂದೆ ಸಂಶಯವಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ರಸ್ತೆಯನ್ನು ಕೆಆರ್ ನಗರ ತಾಲೂಕಿನವರೆಗೆ ೧೫ರಿಂದ ೧೬ ಮೀ ವರೆಗೆ ಅಗಲೀಕರಣಗೊಳಿಸಲಾಗಿದೆ.ಆದರೆ ನಮ್ಮ ತಾಲೂಕಿನಲ್ಲಿ ಕೇವಲ ೧೧ ಮೀ ಕಿರಿದುಗೊಳಿಸಲಾಗಿದೆ. ಅಲ್ಲಿಗೊಂದು ನ್ಯಾಯ ಇಲ್ಲಿಗೊಂದು ಅನ್ಯಾಯ ಎಸಗಲಾಗುತ್ತಿದೆ. ಗುತ್ತಿಗೆದಾರರನ್ನು ಕೇಳಿದರೆ ಅದೇ ಉತ್ತರ. ಗಡಿ ಭಾಗದ ಪ್ರಮುಖ ಪಟ್ಟಣ ಭಾಗದಲ್ಲಿ ಡಿವೈಡರ್ ರಸ್ತೆ ನಿರ್ಮಿಸಿ ವಿಸ್ತೀರ್ಣಗೊಳಿಸದೆ ಲೋಪ ಎಸಗಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ಲೋಪವಾದರೂ ಜನಪ್ರತಿನಿಧಿ ಕಣ್ಣಿಗೆ ಬಿದ್ದಿಲ್ಲ. ಅಗತ್ಯವಾದ ಭೂ ಸ್ವಾಧೀನ ಪಡಿಸಿಕೊಂಡರೂ ಗುತ್ತಿಗೆದಾರ ತಲೆಕೆಡಿಸಿಕೊಂಡಿಲ್ಲ, ಇದು ಅನುಮಾನಕ್ಕೆ ಆಸ್ಪದವಾಗಿದೆ ರಸ್ತೆ ವಿಸ್ತೀರ್ಣವನ್ನು ಹೆಚ್ಚಿಸಿ ಅಭಿವೃದ್ಧಿಪಡಿಸುವಂತೆ ಮಂತ್ರಿಗಳ ಗಮನಕ್ಕೆ ತಂದು ಸರ್ಕಾರಕ್ಕೆ ಪತ್ರ ಬರೆಯುವೆ, ರಸ್ತೆ ಕಾಮಗಾರಿ ವೈಜ್ಞಾನಿಕತೆಯಿಂದ ಕೂಡಿದಿದ್ದರೆ ಈ ಭಾಗದ ಹಳ್ಳಿಗಳ ಜನರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎ. ಮಂಜು ಗುಡುಗಿದರು.
0 Comments