ನಮ್ಮ ಬೇಡಿಕೆಗಳತ್ತಲೂ ಗಮನ ಹರಿಸಿ; ಅಂಗನವಾಡಿ, ಬಿಸಿಯೂಟ ಕಾರ್ಯಕರ್ತರ ಮನವಿ

ಅರಕಲಗೂಡು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ಅಂಗನಾಡಿ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಯೋಜನೆ ಕಾರ್ಯಕರ್ತರು ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ಅಂಗನವಾಡಿ ನೌಕರರ ಸಂಘದ ಅದ್ಯಕ್ಷೆ  ಅಂಬಿಕಾ ರವರ ನೇತೃತ್ವದಲ್ಲಿ ಸುಮಾರು 20 ಜನರು 50000 ಆರೋಗ್ಯ ವಿಮೆ 10000 ಹೆಚ್ಚುವರಿ ಕೊವೀಡ್ ಭತ್ಯೆ, ಕೊವೀಡ್ ಪಿಡಿತರಿಗೆ 10 ಲಕ್ಷ ಪರಿಹಾರ ,ಪಿಂಚಣಿ ,20ಸಾವಿರ. ಸಂಭಳ ನೀಡಬೇಕು ಎಂದು ತಾಲ್ಲೂಕು ಕಚೇರಿ ಬಂದು ತಹಶಿಲ್ದಾರ್ ರೇಣುಕುಮಾರ್ ,  ಮತ್ತು  CDpO ಕಛೇರಿಗೆ ತೆರಳಿ CDPO ಹರಿಪ್ರಸಾದ್ ರವರಿಗೆ ಮನವಿ ನೀಡಿ ತೆರಳಿದರು.
  ಬಿಸಿಯೂಟ ನೌಕರರ ತಾಲೂಕು ಅಧ್ಯಕ್ಷರಾದ ಯಶೋಧಮ್ಮ ನೇತೃತ್ವದಲ್ಲಿ  . ಸುಮಾರು  15 ಬಿಸಿಊಟ ನೌಕರರು  ಅರಕಲಗೂಡು ತಾಲ್ಲೂಕು ಪಂಚಾಯಿತಿಗೆ ಬಂದು  ಕನಿಷ್ಠ ವೇತನ ಹೆಚ್ಚಿಸಬೇಕು, ಉದ್ಯೋಗ ಕಾಯಂಗೊಳಿಸಬೇಕು, ನಿವೃತ್ತಿ ವೇತನ ಪಾವತಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸ ಬೇಕೆಂದು  ಒತ್ತಾಯಿಸಿ E.O ರವರಿಗೆ  ಮನವಿ ನೀಡುದರು .ನಂತರ ತಾಲ್ಲೂಕು ಕಛೇರಿಗೆ ಆಗಮಿಸಿ ತಹಶಿಲ್ದಾರ್ ರೇಣುಕುಮಾರ್ ರವರಿಗೆ ಮನವಿ ನೀಡಿ ತೆರಳಿದರು.

Post a Comment

0 Comments