ಕಾವೇರಿ ಹೊಳೆಯಲ್ಲಿ ಮಹಿಳೆ ಕಾಪಾಡಿದ ಅಗ್ನಿ ಶಾಮಕ ಸಿಬ್ಬಂದಿ

ಅರಕಲಗೂಡು: ತಾಲೂಕಿನ ರಾಮನಾಥಪುರದ ಕಾವೇರಿ ನದಿಯ ನಡುಗಡ್ಡೆಯಲ್ಲಿ ಕುಳಿತು ದಂಡೆಗೆ ಬರಲಾಗದೆ ನಿತ್ರಾಣಗೊಂಡಿದ್ದ ಮಹಿಳೆಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿ ದಡಕ್ಕೆ ತಲುಪಿಸಿದರು.
ಮಹಿಳೆಯು ಮೈಸೂರಿನ ಚಲುವಮ್ಮ (36) ಎಂದು ತಿಳಿದುಬಂದಿದೆ. ಶುಕ್ರವಾರ ಬೆಳಗ್ಗೆ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ತಳಭಾಗದಲ್ಲಿನ ನಡುಗಡ್ಡೆಯಲ್ಲಿ ಕುಳಿತಿದ್ದ ಮಹಿಳೆಯು ಇಕ್ಕೆಲಗಳಲ್ಲಿ ಹರಿಯುತ್ತಿದ್ದ ನದಿ ನೀರಿನ ಸೆಳೆತದಿಂದಾಗಿ ದಡಸೇರಲಾಗದೆ ನಿಸ್ಸಹಾಯಕರಾಗಿ ಕುಳಿತಿದ್ದುದನ್ನು ಕಂಡ ಸ್ಥಳೀಯರ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ದೋಣಿಯನ್ನು ಬಳಸಿಕೊಂಡು ಮಹಿಳೆಯನ್ನು ಸುರಕ್ಷಿತವಾಗಿ ಡದಸೇರಿಸಿದರು.
ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ರಂಗನಾಥ್, ಮಲ್ಲೇಶ್, ಪ್ರದೀಪ್, ಚನ್ನೇಗೌಡ, ಮನು ಶ್ರಮಿಸಿದರು.

Post a Comment

0 Comments