ಅರಕಲಗೂಡು: ಕೊರೋನಾ ಲಸಿಕೆ ಹಲವರಲ್ಲಿ ಇಂದಿಗೂ ಅನುಮಾನಗಳನ್ನು ಕೆದಕಿಸುತ್ತಿದೆ, ಇದಕ್ಕಿಲಗಲೊಂದು ಪ್ರಸಂಗ ಜರುಗಿದ್ದು ತಾಲೂಕಿನ ರಾಮನಾಥಪುರ ಹೋಬಳಿ ಮಲ್ಲಿನಾಥಪುರ ಗ್ರಾಮದಲ್ಲಿ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡ ವೇಳೆ ಪದವೀಧರ ಹಾಕಿದ ಪ್ರಶ್ನೆ. ಈ ಸಂಧರ್ಭದಲ್ಲಿ ರಾಜಸ್ವ ನಿರೀಕ್ಷಕರಾದ ಸಿ.ಸ್ವಾಮಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್ ಗ್ರಾಮಲೆಕ್ಕಾಧಿಕಾರಿ ಕೆ.ಜೆ.ಧರ್ಮೇಶ್ ಆಶಾ ಕಾರ್ಯಕರ್ತೆ ಮಂಜುಳ ರವರು ಲಸಿಕೆ ಪಡೆಯದೆ ಇರುವ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಪಡೆಯುವಂತೆ ಮನವೂಲಿಸಿದರು ಈ ಸಂಧರ್ಭದಲ್ಲಿ ಕೆಲವು ಜನ ನಾವು ಯಾವುದೇ ಕಾರಣಕ್ಕೂ ಲಸಿಕೆ ಪಡೆಯುವುದಿಲ್ಲ ಎಂಬುದಾಗಿ ತಿಳಿಸಿದರು.ಅದೇ ಗ್ರಾಮದ ಪದವೀದರ ವಿಧ್ಯಾರ್ಥಿ ಹಾಗೂ ಪ್ರೌಡಶಾಲಾ ಶಿಕ್ಷಕರ ಮಗ ಪ್ರವೀಣ ಎಂಬಾತ ನಾವು ಯಾವುದೇ ಕಾರಣಕ್ಕೂ ಲಸಿಕೆ ಪಡೆಯುವುದಿಲ್ಲ ಏಕಂದರೆ ನಾವು ಕಾಲಿಗೆ ಹಾಕುವ ಚಪ್ಪಲಿ ತೆಗೆದುಕೊಂಡಾಗ ಅದರ ಗ್ಯಾರಂಟಿ ಕೇಳುತ್ತೇವೆ.ಆದುದರಿಂದ ನಾವು ಲಸಿಕೆ ಪಡೆಯಬೇಕಾದರೆ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ ಹಾಗೂ ಏನಾದರು ಅಡ್ಡಪರಿಣಾಮ ಉಂಟಾದರೆ ನಾವೇ ಜವಬ್ದಾರರು ಎಂಬುದಾಗಿ ಬರವಣಿಗೆಯ ಮುಖಾಂತರ ಬರೆದುಕೊಡಬೇಕೆ ಂದು .ತಿಳಿಸಿದರು.
ರಾಜಸ್ವ ನಿರೀಕ್ಷಕ ಸ್ವಾಮಿರವರು ಮಾತನಾಡಿ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಾಗುವುದಿಲ್ಲ ನಿಮ್ಮಂತ ವಿಧ್ಯಾವಂತ ಯುವಕರು ತಿಳುವಳಿಕೆ ಇಲ್ಲದ ಅವಿಧ್ಯಾವಂತರಿಗೆ ಲಸಿಕೆ ಪಡೆಯಲು ತಿಳಿಸಬೇಕು ಹಾಗೂ ನೀವು ಲಸಿಕೆ ಪಡೆಯಬೇಕೆಂದು ತಿಳಿಸಿದರು ಸಹ ವಿಧ್ಯಾವಂತ ಪ್ರವೀಣ ಹಾಗೂ ಕೆಲವು ಅವಿಧ್ಯಾವಂತರು ಒಪ್ಪಲಿಲ್ಲ ಈ ಸಂಧರ್ಭದಲ್ಲಿ ಪಂಚಾಯಿತಿ ನೌಕರರು ಅಂಗನವಾಡಿ ಕಾರ್ಯಕರ್ತೆ ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು
0 Comments