ಅರಕಲಗೂಡು: ಈ ಕ್ಷೇತ್ರದ ಪ್ರಥಮ ಪ್ರಜೆಯೇ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದರೇರ್ಥ? ತಾವು ಹೇಳಿದಂತೆ ನಡೆಯದ ಸರ್ಕಾರಿ ಅಧಿಕಾರಿಗಳನ್ನು ಹಿಡಿತಲ್ಲಿಟ್ಟುಕೊಳ್ಳುವ ದುರುದ್ದೇಶದಿಂದ ಶಾಸಕ ಎ.ಟಿ.ರಾಮಸ್ವಾಮಿ ಭ್ರಷ್ಠಾಚಾರದಂತಹ ಗಂಭೀರ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಪಿ.ರೇವಣ್ಣ ಆರೋಪಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ. ರೌಡಿ ಶಿಟರ್ ಒಬ್ಬರ ಮಾತು ಕೇಳಿ ಪೋಲೀಸ್ ಇಲಾಖೆಯ ಮೇಲೆ ಭ್ರಷ್ಠಾಚಾರದ ಗಂಭೀರ ಆರೋಪ ಮಾಡಿ ತನಿಖೆಗೆ ಪತ್ರ ಬರೆದಿರುವುದು ಶಾಸಕರ ದ್ವಿಮುಖ ನೀತಿಯನ್ನು ತೋರಿಸುತ್ತದೆ. ನನಗೆ ತಿಳಿದಂತೆ ವೃತ್ತ ನೀರೀಕ್ಷರು ಕಾನೂನು ಚೌಕಟ್ಟಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತರೆ ಇಲಾಖೆಗಳಲ್ಲಿ ಭ್ರಷ್ಠಾಷಾರ ತಾಂಡವವಾಡುತ್ತಿದ್ದರೂ ಯಾವುದೇ ಕ್ರಮಕ್ಕೂ ಮುಂದಾಗಿಲ್ಲ. ಅಂಗನವಾಡಿ ಕೇಂದ್ರಗಳ ಬಳಕೆಗೆ ಅಗ್ನಿ ನಂದಕ, ಥರ್ಮಲ್ ಸ್ಕ್ರೀನ್, ತೂಕದ ಯಂತ್ರ ಸೇರಿದಂತೆ ವಿವಿಧ ವಸ್ತುಗಳ ಖರೀದಿಗೆ ಕಂಪನಿಯೊಂದಕ್ಕೆ ರೂ 26.10 ಲಕ್ಷ ಹಣ ನೀಡಿದ್ದರೂ ಈ ವರೆಗೆ ವಸ್ತುಗಳ ಸರಭರಾಜಾಗಿಲ್ಲ. ಸಾಮಗ್ರಿಗಳು ಬಂದಿದ್ದರೆ ಅಂಗನವಾಡಿಯಲ್ಲಿ ಇರಬೇಕು ಇಲ್ಲವೆ ಸಂಬಂಧಿಸಿದ ಇಲಾಖೆಯ ಗೋದಾಮಿನಲ್ಲಿ ಇರಬೇಕು. ಮಾರುಕಟ್ಟೆಯಲ್ಲಿ ಅಗ್ಗದ ದರಕ್ಕೆ ದೊರೆಯುವ ನೋಟ್ ಪುಸ್ತಕಗಳನ್ನು ಹೆಚ್ಚಿನ ದರ ನೀಡಿ ಸಿಡಿಪಿಒ ಇಲಾಖೆ ಖರೀದಿಸಿದೆ. ಈ ಕುರಿತು ತಾಪಂ ಸಭೆಗಳಲ್ಲಿ ಗಂಬೀರವಾದ ಚರ್ಚೆಸಹ ನಡೆದಿದೆ, ಈ ಪ್ರಕರಣ ಶಾಸಕರ ಕಣ್ಣಿಗೆ ಕಾಣುತ್ತಿಲ್ಲವೆ ಎಂದು ಪ್ರಶ್ನಿಸಿದರು.
2009-10ನೇ ಸಾಲಿನಲ್ಲಿ ಮಾಜಿ ಶಾಸಕರಾಗಿದ್ದ ರಾಮಸ್ವಾಮಿ ನರೇಗಾ ಯೋಜನೆಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂದು ಆರೋಪಿಸಿ ಸರ್ಕಾರಕ್ಕೆ ಮೂರು ಬಾರಿ ಪತ್ರ ಬರೆದು ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒ ಗಳ ವಿರುದ್ದ ದೂರು ದಾಖಲಾಗುವಂತೆ ಮಾಡಿಸಿದ್ದರು. ಪ್ರಕರಣ ನ್ಯಾಯಾಲಯದಲ್ಲಿದ್ದು ಇನ್ನೂ ಇತ್ಯರ್ಥವಾಗಿಲ್ಲ. ಇವರುಗಳಲ್ಲಿ ಹಲವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಸಭೆ ಸಮಾರಂಭಗಳಲ್ಲಿ ಮುಂದೆ ಕೂರಿಸಿಕೊಳ್ಳುತ್ತಾರೆ. ಭ್ರಷ್ಠಾಚಾರ ಕುರಿತು ಇದು ಇವರ ದ್ವಿಮುಖ ನೀತಿಯಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ತಾಲ್ಲೂಕಿನಲ್ಲಿ ನಡೆಯುತ್ತಿರುವ ಹಗರಣಗಳ ಕುರಿತು ಪ್ರಶ್ನೆ ಮಾಡುತ್ತಾರೆ ಎಂಬ ಕಾರಣದಿಂದಾಗಿಯೆ ಜಿಪಂ ಸದಸ್ಯರು ಅಧಿಕಾರದಲ್ಲಿರುವವರೆಗೂ ಪ್ರಗತಿ ಪರಿಶಿಲನಾ ಸಭೆಯನ್ನೆ ನಡೆಸಲು ಶಾಸಕರು ಮುಂದಾಗಲಿಲ್ಲ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪೊಲೀಸ್ ಇಲಾಖೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಆರೋಪಗಳನ್ನು ಮಾಡಲಾಗುತ್ತಿದೆ, ಶಾಸಕರಿಗೆ ನೈತಿಕತೆ ಇದ್ದರೆ ಯಾವ ಯಾವ ಇಲಾಗಳಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬುದನ್ನು ಪತ್ತೆ ಹಚ್ಚಿ ಕ್ರಮಕ್ಕೆ ಮುಂದಾಗುವ ಸಂಗಡ ವಿಧಾನ ಸಭೆಯಲ್ಲೂ ಪ್ರಸ್ತಾಪಿಸಲು ಮುಂದಾಗಲಿ ಎಂದು ಆಗ್ರಹಿಸಿದರು.
0 Comments