ವಾಸಂತಿ ನಲಿದಾಗ ಸಿನಿಮಾದ ಅಮರಶಿಲ್ಪಿ ಜಕಣಾಚಾರಿ ಆಡಿಯೋ ಬಿಡುಗಡೆ ಸಂಭ್ರಮದಲ್ಲಿ ಶ್ರೀಗಳು, ಗಣ್ಯರ ಸಮಾಗಮ
ಅರಕಲಗೂಡು: ತಾಲೂಕಿನ ಅರೇಮಾದನಹಳ್ಳಿ ಮಠದ ವಿಶ್ವಕರ್ಮ ಮಹೋತ್ಸವದಲ್ಲಿ ಪ್ರಸಿದ್ದ ಜೇನುಗೂಡು ಶ್ರೀಧರ್ ನಿರ್ಮಾಣದ "ವಾಸಂತಿ ನಲಿದಾಗ" ಸಿನಿಮಾದ ಅಮರಶಿಲ್ಪಿ ಜಕಣಾಚಾರಿ ಹಾಡಿನ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಶುಕ್ರವಾರ ಸಂತಸದ ಕ್ಷಣಗಳು ಮೆಳೈಸಿದ್ದವು.
ನಾಡಿನ ವಿವಿಧ ಭಾಗದಿಂದ ಅಪಾರ ಭಕ್ತರು ಬಂದಿದ್ದರು. ಕೋಡಿ ಮಠದ ಶ್ರೀಗಳ ಸಮ್ಮುಖದಲ್ಲಿ ವಿಶ್ವಕರ್ಮ ಬ್ರಾಹ್ಮಣ ಮನ್ಮೂಲ ಮಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಅಮೃತ ಹಸ್ತದಿ ಆಡಿಯೋ ಬಿಡುಗಡೆಗೊಳಿಸಿದರು.
ಸಿನಿಮಾ ಹಾಡು ಕಥಾ ವಸ್ತು ಕುರಿತು ಸಾಹಿತ್ಯ ಕೂಡ ರಚಿಸಿರುವ ಶ್ರೀಧರ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ಅವಿಸ್ಮರಣಿಯವಾಗಿತ್ತು.
ನಾಡಿನ ಕಲೆ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಗೆ ವಿಶ್ವಕರ್ಮ ಸಮಾಜ ಬಹುದೊಡ್ಡ ಕೊಡುಗೆ ನೀಡಿದ ಶ್ರೇಷ್ಠತೆ ಹೊಂದಿದೆ ಎಂದು ಕೋಡಿ ಮಠದ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಬಣ್ಣಿಸಿದರು.
ಜಗತ್ತಿನ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಶ್ರೀ ಮಠದಲ್ಲಿ ಚಾರ್ತುಮಾಸ್ಯ ವ್ರತಾಷ್ಠಾನದಂತೆ ಸತ್ಕಾರ್ಯಗಳನ್ನು ನಡೆಸುತ್ತಿರುವುದು ಮನುಕುಲದ ಒಳಿತಿನ ಸಂಕೇತವಾಗಿದೆ ಎಂದರು.
ವಿಶ್ವಕರ್ಮ ಬ್ರಾಹ್ಮಣ ಮನ್ಮೂಲ ಮಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಅಮರಶಿಲ್ಪಿ ಜಕಣಾಚಾರಿ ಹಾಡಿನ ಆಡಿಯೋ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ ಬೇಲೂರು ಹಳೇಬೀಡು ಇತ್ಯಾದಿ ಎಲ್ಲೆಡೆ ವಾಸ್ತುಶಿಲ್ಪದ ಕೊಡುಗೆ ಸಮಾಜದ ಹೆಮ್ಮೆ ಎಂದು ನುಡಿದರು.
ಮಾಜಿ ಸಚಿವ ಎ. ಮಂಜು ಮಾತನಾಡಿ, ಸಾಂಸ್ಕೃತಿಕ ಪರಂಪರೆ ಪ್ರತೀಕವಾಗಿ ವಿಶ್ವಕರ್ಮ ಸಮಾಜ ಸಲ್ಲಿಸಿರುವ ಸೇವೆ ಕೊಂಡಾಡಿದರು.
ಚಲನ ಚಿತ್ರ ನಿರ್ಮಾಪಕ ಜೇನುಗೂಡು ಶ್ರೀಧರ್, ನಿರ್ದೇಶಕ ರವೀಂದ್ರ ವಂಶಿ, ನಾಯಕ ನಟ ರೋಹಿತ್, ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ, ಸಮಾಜದ ಗಣ್ಯರು ಪಾಲ್ಗೊಂಡಿದ್ದರು.
0 Comments