ಅರಕಲಗೂಡು: ಭೂಕಂಪ, ಪ್ರಳಯದ ಅಘಾತವಿದೆ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಅವಧಿ ಪೂರ್ಣಗೊಳಿಸುವ ಕುರಿತು ಸದ್ಯಕ್ಕೆ ಏನನ್ನೂ ಹೇಳಲಾರೆ, ಸಂಕ್ರಾAತಿ ಕಳೆಯಬೇಕು ಕೋಡಿ ಮಠದ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದರು.
ತಾಲೂಕಿನ ಅರೇಮಾದನಹಳ್ಳಿ ಮಠದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆರು ತಿಂಗಳ ಹಿಂದೆ ಹೇಳಿದಂತೆ ಸೂತ್ರದಾರಿ ಪಟ್ಟ ಅಳಿಯಲಿದ್ದು ಸೂತ್ರದಾರಿಗಳು ಆಡಳಿತ ನಡೆಸುವರು ಎನ್ನುವುದು ನಿಜವಾಗಿದೆ. ಬಸವರಾಜು ಬೊಮ್ಮಾಯಿ ಒಳ್ಳೆಯವರು. ಆದರೆ ಆಡಳಿತ ನಡೆಸುವ ರಿಮೋಟ್ ಕಂಟ್ರೋಲ್ ಯಡಿಯೂರಪ್ಪ ಮತ್ತು ಅಮಿತ್ ಷಾ ಅವರ ಕೈಯಲ್ಲಿರುತ್ತದೆ ಎಂದರು.
ವಿಶ್ವವನ್ನು ಕಾಡುತ್ತಿರುವ ಕರೊನಾ ಸೋಂಕು ಮನುಷ್ಯನಿಗೆ ಸಾವು ತರುವುದಿಲ್ಲ. ಸದ್ಯಕ್ಕೆ ಸೋಂಕು ಸಂಪೂರ್ಣ ನಿವಾರಣೆಯಾಗದೆ ಒಂದಿಲ್ಲೊAದು ರೂಪದಲ್ಲಿ ರೂಪಾಂತರ ಪಡೆದು ಮನುಕುಲಕ್ಕೆ ಭೀತಿ ಸೃಷ್ಟಿಸಲಿದೆ. ಸ್ವಚ್ಚತೆಗೆ ಹೆಚ್ಚು ಒತ್ತು ನೀಡಬೇಕು. ಬರುವ ಡಿಸೆಂಬರ್ ಜನವರಿ ತನಕ ಮಳೆಯಾಗಲಿದ್ದು ಭೂಮಿ ಮತ್ತು ಪ್ರಳಯದಿಂದ ಅಘಾತವಾಗುವ ಸಾಧ್ಯತೆ ಇರುತ್ತದೆ. ತದನಂತರ ಸ್ವಲ್ಪ ಕಡಿಮೆಯಾಗಲಿದೆ. ಆದರೂ ಜನಜೀವನಕ್ಕೆ ಕಷ್ಟಕರವಾಗಲಿದೆ. ಮನುಷ್ಯ ಕೋಪ, ಅಸೂಹೆ ಸಂದೇಹಗಳನ್ನು ತೊರೆಯಬೇಕು ಎಂದರು.
ಮೊದಲಿಗೆ ಕಾಶ್ಮಿರದಲ್ಲಿ ಆವತರಿಸಿದ ಉಗ್ರಗಾಮಿ ಚಟುವಟಿಗಳು ನಂತರ ಜಗತ್ತಿನ ಹಲವೆಡೆ ವ್ಯಾಪಿಸಿ ಆತಂಕ ಸೃಷ್ಟಿಸಿವೆ. ಆಫ್ಘಾನಿಸ್ಥಾನವು ಭಯೋತ್ಪಾದನೆಯ ಪ್ರತಿಫಲ ಅನುಭವಿಸಿದೆ. ಕಾಶ್ಮಿರದಲ್ಲಿ ಉಗ್ರರ ಉಪಟಳ ತಗ್ಗುವುದಿಲ್ಲ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿ ಅವರಿಗೆ ಮುಂದೆಯೂ ಶುಭವಾಗಲಿದೆ. ಪಕ್ಷ ಮುಂದೆ ಅಧಿಕಾರಕ್ಕೆರಲು ಜನರ ಭಾವನೆಗಳ ಮೇಲಿದೆ ಎಂದರು.
0 Comments